ಕೊಳಲ ನಾದದಿ
ಕೊಳಲ ನಾದದಿ ಜಗವನು
ಕುಣಿಸಿದ ಬಾಲಲೋಲನು
ತೊದಲ ಮಾತನು ನುಡಿಯುತ
ತಣಿಸಿದ ಎಲ್ಲರ ಮನವನು
ದೇವಕಿನಂದ ಯಶೋಧ ಕಂದ
ಮುರಳಿ ಮಾಧವ ಮುರಳಿ ಮಾಧವ
ಬಾಲ್ಯದಲ್ಲಿ ಬಾಲಲೀಲೆ ತೊರಿದ ಬಾಲಕ
ಬಾಯಿಯಲ್ಲಿ ಬ್ರಹ್ಮಾಂಡವನೆ ತೊರಿದ ನಾಯಕ
ನಿನ್ನಯ ಜಪವೆ ತಪವಾಗಿ
ಕೊಳಲ ನಾದಕೆ ಮರುಳಾಗಿ
ನಿನ್ನನೆ ಅರಸಿ ಬಂದೆನು ನಾನು
ದೇವಕಿ ನಂದ ಯಶೋಧ ಕಂದ
ಮುರಳಿ ಮಾಧವ ಮುರಳಿ ಮಾಧವ
ಧರ್ಮದಿಂದ ನಡೆದವರ ರಕ್ಷಿಸಿದ ಪಾಲಕ
ಗರ್ವದಿಂದ ಮೆರೆದವರ ಶಿಕ್ಷಿಸಿದ ಶಿಕ್ಷಕ
ನಿನ್ನಯ ಕರುಣೆ ನಮಗಾಗಿ
ಸಿಗಲಿ ನಮಗೆ ವರವಾಗಿ
ಕರವ ಮುಗಿದು ಬೇಡುವೆ ನಾನು
ದೇವಕಿ ನಂದ ಯಶೋಧ ಕಂದ
ಮುರಳಿ ಮಾಧವ ಮುರಳಿ ಮಾಧವ
- ಆನಂದ್
24 Aug 2016, 08:21 pm
Download App from Playstore: