ನಿನ್ನ ಮೇಲೊಂದು ಕವನ ಬರೆಯಲೇ

ಶೀರ್ಷಿಕೆ: ನಿನ್ನ ಮೇಲೊಂದು ಕವನ ಬರೆಯಲೇ

ನಿನ್ನ ಮೇಲೊಂದು ಕವನ ಬರೆಯಲೇ
ಹಾಡಿನಲ್ಲಿ ನಿನ್ನ ಅಂದವ ಹೊಗಳಲೇ

ಕಿಸಕ್ಕನೆ ನಗುವ ನಿನ್ನ ತುಟಿಯ ಹೊಗಳಲೇ
ಬಳ್ಳಿಯಂತೆ ಬಳುಕುವ ನಿನ್ನ ನಡಿಗೆಯ ಹೊಗಳಲೇ
ಗೆಜ್ಜೆಯಲ್ಲಿ ಹೆಜ್ಜೆ ಹಾಕುವ ಪಾದ ಹೊಗಳಲೇ
ಗಲ್ಗಲ್ ಎಂದು ಬಳೆಯ ತೊಡುವ ಕೈಗಳ ಹೊಗಳಲೇ

ಅಂದದ ತಿಲಕವಿಡುವ ಹಣೆಯ ಹೊಗಳಲೇ
ಬಣ್ಣಬಣ್ಣದ ತೊಡುವ ನಿನ್ನ ಉಡುಗೆಯ ಹೊಗಳಲೇ
ಮುತ್ತಿನ ಮೂಗುತಿ ತೊಡುವ ನಿನ್ನ ನಾಸಿಕ ಹೊಗಳಲೇ
ನಸುನಾಚುವ ನಿನ್ನ ವೈಯಾರ ಕಂಡು ಹೊಗಳಲೇ

ಯಾವ ರೀತಿ ಹೊಗಳಲಿ ಹೇಳು
ನಿನ್ನ ಅಂದ ಚಂದಕೆ
ಬಳ್ಳಿಯಂತೆ ಬಳುಕಿ ಬಂದು
ಸೇರು ಬಾ ನನ್ನ ಸನಿಹಕೆ

Girishachara S

- Girishachara S

12 Jul 2025, 11:24 pm
Download App from Playstore: