? ಪ್ರೀತಿ ಎನ್ನುವುದು ನಿಶ್ಶಬ್ದ ಚಂದ್ರನಂತೆ... ?
ಆಕಾಶದ ನಡುಭಾಗದಲ್ಲಿ, ನಕ್ಷತ್ರದ ನಿದ್ರೆ ನಡುವೆ,
ನೀನು ನಾನಾಗಿ ಬೆರೆದು ನಿಂತೆ — ಆ ಬೆಳಕು ಚಂದ್ರಮೆಯ ಹಾದಿಯಲ್ಲಿ.
ಒಂದೆಮಾತು ಇಲ್ಲ, ಕೇವಲ ಕಣ್ಣುಗಳ ಮಾತು,
ಆ ಬಣ್ಣಗಳ ನಡುವಣ ಪ್ರೇಮ — ನಡುಕಲ್ಲು ಮೇಲೆ ಹುಟ್ಟಿದ ಹೂವಂತು.
ಓಡುತಿರಲಿಲ್ಲ ಕಾಲ —
ಆ ಗಾಳಿಯ ಮೆಲ್ಲ ನಗೆಯಲ್ಲಿ ನಿನ್ನ ಕೂದಲು ಆಡಿದಾಗ,
ನನ್ನ ಹೃದಯ ಮೌನವಾಗಿತ್ತು, ನಿನ್ನ ಹತ್ತಿರವಾಗಿತ್ತು.
ಒಂದೆ ಬದಿ ಹಸುರು ಕನಸುಗಳು, ಮತ್ತೊಂದು ಬದಿ ಮೌನದ ನಿಶ್ಯಬ್ದತೆ,
ಆ ನಡುವೆ ನಾವಿಬ್ಬರು — ಪ್ರೀತಿಯ ನೆರಳಲ್ಲಿ ಮರದಡಿಯಲ್ಲಿ.
ನಿನ್ನೊಂದಿಗಿರುವ ಕ್ಷಣವೇ ಜೀವನದ ಶಾಶ್ವತ ರಾಗ,
ನಿನ್ನನ್ನು ನಂಬಿರುವ ನನ್ನ ಪ್ರೀತಿಯೇ ನನ್ನ ಧ್ಯಾನ, ನನ್ನ ಜಗ.
✍️ತಲ್ವಾರ್ ಹನುಮಂತ
- Vir Hanumanth
13 Jul 2025, 11:49 pm
Download App from Playstore: