ಭಾವಗಳೆದುರು
ಮನದಾಳದೀ ಕೂತಿಹುದು ನೂರಾರು ಭಾವಗಳು
ಕಣ್ಣ ರೆಪ್ಪೆಯಲ್ಲಿ ಅಡಗಿಹುದು ಭಾವನೆಗಳ ನೋವುಗಳು, ಮರೆಯಬೇಕೆಂದರೆ ಮರೆಯಾಗದ ಚಿತ್ರಣಗಳು ಕಾಡುತಿಹುದು ಪದೇ ಪದೇ ಬೆಂಬಿಡದ ಬೇತಾಳದಂತೆ.
ಜೀವನವೆಂದರೆ ಇದೇನಾ ನೋವುಗಳ
ಸರ ಮಾಲೆಗಳು ಹೆಣದಂತೆಲ್ಲ ಆಗುವುದು ಸುಂದರಮಾಲೆ ಮಾಲೆಗೆ ಹಾಕಿದ ಗಂಟುಗಳು ಬಿಡಿಸಲಾಗದ ಬಂಧನಗಳು,
ಜೀವಕ್ಕೆ ಬೆಲೆ ಇಲ್ಲದ ಜಗತ್ತಿನಲ್ಲಿ
ಬದುಕುತಿರುವೆವು ನಾವೆಲ್ಲ
ಪ್ರಾಣಿಗಳೇ ಲೇಸೆಂದು ಬದುಕುವ
ಪರಿ ಮಾನವನದು.
ನಾ ಮೇಲು ನೀ ಮೇಲು ಎನ್ನುತಾ
ಒಂದು ದಿನ ಹೋಗುವೆವು
ಇಹಲೋಕವನ್ನು ತ್ಯಜಿಸಿ.
- ಮೇಘಾ ಬೆಳಧಡಿ
25 Jul 2025, 07:32 pm
Download App from Playstore: