ಬಾಳೊಂದು ಪಯಣ
ಬಾಳೊಂದು ಪಯಣ ದಾಟಬೇಕು ಎಲ್ಲವನ ಕಷ್ಟ ಸುಖವೇಂಬ ಪೈರಿ ಹತ್ತಬೇಕೋ ನೀ ಏರೀ
ಜ್ಞಾನವೆಂಬ ಕೂದುರಿ
ಓಡಿಸೋ ನೀ ಮನಸಾರೀ
ಏಳು ಬೀಳುವಿನ ಸಂತೇ ದಾಟಿ
ಹತ್ತಬೇಕೋ ಜಯವೆಂಬ ಮೇಟಿ
ಯಾವುದು ಸ್ಥಿರವಲ್ಲ ಮಾನವ
ತಿಳಿದುಕೊಳ್ಳೋ ನೀನ್ನ ಅಂತರಾಳವ
ನಾನು ನನ್ನದು ಬಿಡುವರೆಗೂ
ಸಿಗದು ಮೋಕ್ಷ ನಿನಗೆಂದಿಗೂ
ಶರಣು ಹೋಗು ಗುರುವಿಗೇ
ಕಾಯುವನೋ ಕೊನೇವರೆಗೆ
ಗುರು ಸಿದ್ದಾರೂಡರೂ ಇಹರು ಬೆನ್ನಿಗೆ
ಕಷ್ಟ ಸುಖದ ಭಯವಿಲ್ಲಾ ಎನಗೆ
ಕಾಯುವನು ನಿತ್ಯಾ ನೆನೆದವರಿಗೇ
ಬಾಳಿನ ಪಯಣ ಮುಗೀವರೆಗೆ
ಕಾಯುವನೋ ಕೊನೇವರೆಗೆ
ಗುರು ಸಿದ್ದರೂಡರು ಇಹರು ಬೆನ್ನಿಗ
ಕಾಯುವನು ಕೊನೇವರೆಗೆ
ಗುರು ಸಿದ್ದರೂಡರಿಹರು ಬೆನ್ನಿಗೆ
ಕಾಯುವನು ಕೊನೇವರೆಗೆ
- ಮಂಜುಳಾ ನಾಗರಾಜ
26 Jul 2025, 02:01 pm
Download App from Playstore: