ಸ್ನೇಹ ಬಾಂಧವ್ಯ

ನದಿ ದಂಡಿ ಮೇಲೊಂದು ಮರವಿತ್ತು
ನೂರಾಯೆಂಟ ಹಕ್ಕಿ ಅಲ್ಲಿ ಕುಳಿತಿತ್ತು
ಎರಡ ಹಕ್ಕಿ ಸ್ನೇಹ ಬೇಳೆದಿತ್ತು

ಕಷ್ಟ ಸುಖದಲ್ಲಿ ಪಾಲಿತ್ತೂ
ಕೂಡಿ ಉನ್ನುವುದರಲ್ಲಿ ಒಂದೇ ತುತ್ತು
ಆಡಿದ ಆಟಾ ನೆನಪಾತೂ
ನೆನಪೊಂದೇ ಕಾಣಿಕೆ ಆತು

ಬೇಟೆಗಾರ ಬಂದಾ ಮರಕಡೆಗೇ
ಬಿಲ್ಲು ಬಾಣ ಹಿಡಿದಾ ಕೈಯೊಳಗೆ
ಗುರಿ ಇಟ್ಟಾ ಹಕ್ಕಿಗೇ
ಬಾಣ ತಾಗಿ ಹಕ್ಕಿ ಬಿತ್ತು ನೆಲಕೇ

ಗೆಳೆಯನ ಕಳಕೊಂಡ ಹಕ್ಕಿ
ಅಳುತ್ತಾ ಹೇಳಿತು ಬಿಕ್ಕಿ, ಬಿಕ್ಕಿ
ನನ್ನ ಹೋಡೆ ಮೋದಲು
ಸೇರಬೇಕು ಗೆಳೆಯನ ಒಡಲು

ಆಡಿದ ಆಟಾ ನೆನಪಾತೂ
ಮಾಡಿದ ತುಂಟಾಟ ಮನಸ್ಸಲ್ಲಿತ್ತು
ನೆನಪೊಂದೇ ಕಾಣಿಕೇ ಆತು
ಗೆಳೆತನಾ ಅಗಲಿ ಹೋತು

ಮಂಜುಳಾ ನಾಗರಾಜ ✍️

- ಮಂಜುಳಾ ನಾಗರಾಜ

27 Jul 2025, 12:37 pm
Download App from Playstore: