⛵ ಜೀವನ ನಾವೆ ⛵

ಹಾದು ಹೋದ ಕಣ್ಣುಗಳು
ಆಡಿ ಹೋದ ಮೌನ ಮಾತು
ಕಿವಿಗಳು ಶ್ರವಿಸದಿರಬಹುದು
ಭಾವನೆಗಳಿಂದ ಭಾರವಾದ
ಬಡ ಹೃದಯದ ಗತಿಯೇನು?

ನನ್ನದೂ ಒಂದು ಬದುಕು,
ಜನರಲೆಯುವ ಅಳತೆ ಕೋಲಿನ
ಬಳಕೆಗಷ್ಟೇ ಉಪಯೋಗಕಿರುವವನು
ಅನ್ನುವವರು ಅನ್ನಲಿ ಎನ್ನಬಹುದಿತ್ತು
ಕಣ್ಣುಗಳು ಸುಮ್ಮನಿರಬೇಕೇ

ಸಾತು ನೀಡುವ ಪ್ರಿಯ ಮಿತ್ರ
ಕತ್ತಲ ಇರುಳಿನ ಆಣೆ,
ಚಿಮ್ಮುವ ಕಣ್ಣ ಧಾರೆಯ ರಭಸಕೆ
ಗಲ್ಲದಿ ತಟಸ್ಥವಾದ ಮೊರೆ
ಎಲ್ಲಿ ನಿಯಂತ್ರಣ ತಪ್ಪುವುದೋ
ಎನ್ನುವ ಭಯ ಎನಗೆ!

ಮನದಲೇ ಸುಕ್ಕುಹಿಡಿದ
ಭಾವನೆಗಳ ರಾಶಿಗೆಲ್ಲಿದೆ ಬೆಲೆ?
ಬಳಿ ಸುಳಿವ ಸಾವಿರ
ಆಲೋಚನಾ ಬಳ್ಳಿಗಳ ತೋಟಕೆ
ನೀರ ಹುಯ್ದು ಹಾಯುವ ಗಾಳಿ ನಾನು,
ಹಿಡಿಯಲೆತ್ನಿಸಿ ಸೋತೂ ಸೋಲದೆ
ಉದುರುವ ಬಣ್ಣದ ಎಲೆಯನು
ಕುಳಿತು ಕಾಯುತಿರುವೆನು ಇನ್ನೂ

- ಅಮಾಯಕ

- Introvert Soul

30 Jul 2025, 07:34 pm
Download App from Playstore: