ಹೇಳಿ ಹೋಗು ಕಾರಣ
ಪ್ರೀತಿ ಪ್ರೇಮದ
ಕಿಚ್ಚ ಹೆಚ್ಚು ಮಾಡಿ
ಮನದ ಭಾವಗಳು ಉಕ್ಕುವಂತೆ
ಮಾಡಿ ಈಗೇಕೆ ದೂರಾದೆ.
ಹಗಲು ರಾತ್ರಿಗಳು
ನಿನ್ನ ಕಲ್ಪನೆಯಲ್ಲಿ ಮೂಡಿತ್ತು.
ನಕ್ಷತ್ರಗಳ ಸಾಲಲ್ಲಿ,ಮೋಡಗಳ ಮರೆಯ,ಲ್ಲಿ ಪ್ರೀತಿಯ ಹೊಂಬಿಸಲು, ಈಗ ನೀನೆಲ್ಲಿ?
ನಿನ್ನ ಪುಟ್ಟ ಹೃದಯದಲ್ಲಿ
ನಾನೇ ರಾಣಿಯಾಗಿರುವೆ ಎಂದ ಅರಿತಿದ್ದೆ.
ಹಗಲು ಕನಸುಗಳು ತೇಲಿ ಹೋದವು
ಕಾರಣಗಳೇ ತಿಳಿಯಲಿಲ್ಲ.
ನನ್ನ ದೂರ ತಳ್ಳಿ ಪ್ರೀತಿಯನ್ನು ಅವಮಾನಿಸಿ
ಅಂತ್ಯದಲ್ಲಿ ನೀ ನನಗೆ ಉಳಿಸಿದ್ದು ಕಾಳ್ಗಿಚ್ಚಿನಂತ ನೋವು.
ಕಾರಣ ತಿಳಿಸದೆ ದೂರಾದೇಕೆ? ಹೇಳಿ ಹೋಗು ಕಾರಣ.
- ಮೇಘಾ ಬೆಳಧಡಿ
02 Aug 2025, 09:39 am
Download App from Playstore: