ತಾಯಿ
ಯಾವ ಧರ್ಮದವರಾದರೇನು?
ಹೆತ್ತವಳು ತಾಯಿಯಲ್ಲವೇ!
ಯಾವ ದೇಶದವರಾದರೇನು?
ಹಡೆದವಳು ಹೆಣ್ಣಲ್ಲವೇ!
ಬಡವ ಶ್ರೀಮಂತ ಯಾರಾದರೇನು?
ಜೀವ ನೀಡುವವಳು ತಾಯಿಯಲ್ಲವೇ!
ಯಾವ ಊರಿನವರಾದರೇನು?
ಹುಣಬಡಿಸುವವಳು ಮಾತೆಯಲ್ಲವೇ!
ಯಾವ ಜಾತಿ ಜನಾಂಗವಾದರೇನು?
ಸುಖ ನೀಡುವವಳು ಸಖಿಯಲ್ಲವೇ!
ಗಡಿರೇಖೆಗಳನ್ನು ಮೀರಿದಾಕೆ
ನೀತಿನಿಯಮಗಳ ದಾಟಿದಾಕೆ
ಸರ್ವಕಾಲಕ್ಕೂ ಸರ್ವ ಜನಾಂಗಕ್ಕೂ
ನಿತ್ಯ ಅನ್ನ ನೀಡಿ ಪೊರೆವವಳು
ನನ್ನ ಹೆತ್ತವಳು ನೀನಲ್ಲವೇ ತಾಯಿ......
ಡಾ. ನಾಗೇಶ್ ಮೌರ್ಯ
- ಡಾ ನಾಗೇಶ ಮೌರ್ಯ
07 Aug 2025, 10:40 am
Download App from Playstore: