ಕಲಿ ಕಲಿಕೆಯ ಕಲಿಯಲಿ

ಕಲಿ ಕಲಿಕೆಯ ಕಲಿಯಲಿ
ಕಲಿಕೆಯ ಅತಿಮೋಹನವು ಅಂಧಕಾರದಾಳಾಗಿ...
ಕಲಿಕೆಯ ಕಲಿಭಾವತ್ವನರಿಯದೆ
ಸ್ವಾರ್ಥದೊಳು ನಶ್ವರ ಕರ್ಮದಾರಿಯಲಿ
ಧರ್ಮದರಿವಿನ ಜೀವದಸಿರ ಕೊಲ್ಲುತ್ತಿರುವೆಯೋ ಮನುಜ...

ಕಲಿಕೆಯ ಕಲಿಯೊಳು
ಬಾಳು ಹಗಲೂ ಇರುಳೊ ಎಂಬುದರಿಯದೆ... ಅಂಧಕಾರದೊಳು ತನ್ನನ್ನೇ ತಾನೂ
ತನ್ನೊಳಗೆ ಸಿಲುಕಿಸಿರುವೆಯೋ ಮನುಜ...

ಮನ ಮನದರಿವಿನ ಆನಂದನದಲಿ
ಮನಃಶಾಂತಿಯ ಕಲಿಕೆಯೇ ಆತ್ಮಾನಂದವೋ...
ಮನ ಮನದಿತ ಭಾವತ್ವದರಿವಿನ ಜೀವನದಾನಂದಲಿ
ಮನ ಮನದಂತರಾಳದ ಮಹ ಕಲಿಕೆಯೇ ಪರಮಾತ್ಮನಾ ಪರಮಾನಂದವೋ...


_ಜೀವ ಕಪ್ಪುಚುಕ್ಕಿ


- ಜೀವ ಕಪ್ಪುಚುಕ್ಕಿ

12 Aug 2025, 07:18 pm
Download App from Playstore: