ಬದುಕಬೇಕು ಹೂವಿನಂತೆ

ಅರಳುವ ಹೂವಿಗೆ ತಿಳಿಯದು
ಪಯಣ ದೇವರ ಪೂಜೆಗೋ ಮಸಣದ
ಯಾತ್ರೆಗೋ.
ಆದರೂ ಸೆಳೆಯುವುದು ಎಲ್ಲರ ಕಣ್ಮನವ.

ಹಿರಿ ಹಿರಿ ಹಿಗ್ಗದು ದೇವರ ಮುಡಿ ಸೇರಿದೆನೆಂದು.
ಕೊರಗಿ ಕುಗ್ಗದು ಮಸಣದ ಯಾತ್ರೆಗೆ ಮೀಸಲಾದೆ ಎಂದು.

ಸದಾಕಾಲ ನಗುವುದು ದೇವರ ಮುಡಿ ಏರಿ
ಜೀವನ ಸಾರ್ಥಕಿಸುವುದು ಮಸಣ ಯಾತ್ರೆಗಾಗಿ.


ಅದಕ್ಕಿಲ್ಲ ಕಮರಿ ಹೋಗುವ ಭಯ
ಎಲ್ಲರ ಸೆಳೆಯುವುದು ಸದಾ ನಗುತ್ತಾ.

ಬದುಕಿದರೆ ಬದುಕಬೇಕು ಹೂವಿನಂತೆ.......

written by ಶ್ರೇಯಾ ಎಂ ಎಸ್

- shreya M S

30 Aug 2025, 10:35 pm
Download App from Playstore: