ಮುದ್ದು ಚೆಲುವೆ...
ಮುದ್ದು ಚೆಲುವೆ
ಮಲೆನಾಡ ಮುದ್ದಾದ ಚೆಲುವೆ
ಸದ್ದೇ ಮಾಡದೇ ಮನಸನ್ನೇ
ದೋಚಿ ಹೊದೆಯಾ
ಮುದ್ದು ಚೆಲುವೆ
ಕಂಗಳಲ್ಲೆ ಸೇರಿಕೊಂಡು
ಹೃದಯದ ಬಡಿತಗಳನು
ಹೆಚ್ಚಿಸಿ ಹೊದೆಯಾ
ಮುದ್ದು ಚೆಲುವೆ
ಕನಸಿನಲ್ಲಿ ಕಂಡಾ
ಸೌಂದರ್ಯದ ಸಿರಿಯ
ನನಸಾಗಿಸಿ ಕಾಣದಾದೆಯಾ
ಮುದ್ದು ಚೆಲುವೆ
ಪ್ರೀತಿಯನ್ನೇ ಕೆಣಕಿ
ಪ್ರೀತಿಸಲು ಸಿಗದೇ
ಕಣಿಗು ಕಾಣದೇ ದೂರವಾದೆಯಾ
ಮುದ್ದು ಚೆಲುವೆ
ಹೂವಂತಾ ಮನಸ್ಸಿನ ಸಾಗರದಲ್ಲಿ
ನನಗಾಗಿ ಪುಟ್ಟ ಜಾಗವಾದರು
ನೀಡುವೆಯಾ...
- abhi.s.j
01 Sep 2025, 09:34 am
Download App from Playstore: