ಭಟ್ಟಾಕಳಂಕನ ನಾಡು ಚೆನ್ನಭೖರಾದೇವಿಯ ಬೀಡು.

ಪುಣ್ಯಭೂಮಿಯ ನಾಡು ನಮ್ಮದು,
ಕರಾವಳಿಯ ನೆಲೆಸಿದ ಭಾಗ್ಯ ನಮ್ಮದು.
ಭಟ್ಟಾಕಳಂಕನ, ಚೆನ್ನಭೈರಾದೇವಿಯ ಜಯಭೇರಿ,
ಮೇರೆಯುತ್ತಿರುವ ಜನಸಾಗರವೇರಿ

ಭಟ್ಟಾಕಳಂಕ ಜ್ಞಾನದಿ ಬೆಳಕು ಹರಿದು,
ಚೆನ್ನಭೈರಾದೇವಿ ಧೈರ್ಯದಿ ನಾಡನು ಕಾಪಾಡಿ ನಿಂದಿತು.
ಇವರ ಕೀರ್ತಿಯ ಧ್ವನಿ ಸಾಗರದಿ ಮೊಳಗಿತು,
ಹೆಮ್ಮೆಯ ಪೀಳಿಗೆಗೆ ದಾರಿ ಬೆಳಗಿತು.

ಭಟ್ಟಾಕಳಂಕ ಮಾತು ಮುತ್ತಿನಂತೆ ಮಿಂಚಿತು.
ಚೆನ್ನಭೈರಾದೇವಿಯ ನಡೆ ವೀರತೆಯಂತೆ ಬಡಿದ್ದೆಬ್ಬಿಸಿತು.
ಒಬ್ಬನು ತತ್ತ್ವದ ದಾರಿಯಲ್ಲಿ,
ಇನ್ನೊಬ್ಬಳು ಧೖರ್ಯದ, ಮಾರ್ಗದ ಪಥದಲ್ಲಿ.

ಭಟ್ಟಾಕಳಂಕ ಕೀರ್ತಿಯ ಹೂವು ಅರಳಿತು,
ಚೆನ್ನಭೈರಾದೇವಿಯ ಶೌರ್ಯದ ಮೆರಗು ಕಂಗೊಳಿತು.
ಇವರಿಬ್ಬರ ಪಯಣ ಕರುನಾಡಿನ ಹೆಮ್ಮೆ,
ಇವರಿಬ್ಬರ ಜಯಗುಣಗಾನ ಶಾಶ್ವತ ಹಿರಿಮೆ.

ಭಟ್ಟಾಕಳಂಕನ ನುಡಿ ವಿದ್ಯೆಯ ಹಾದಿ,
ಚೆನ್ನಭೈರಾದೇವಿಯ ನಡೆ ಶೌರ್ಯದ ಹಾದಿ.
ಜ್ಞಾನ–ಧೈರ್ಯ ಒಂದೇ ನಾದವಾಗಿ,
ನಾಡು ಬೆಳೆದಿತು ಉತ್ಸಾಹದ ಕನಸಾಗಿ.

ಭಟ್ಟಾಕಳಂಕ ತರ್ಕದಿ ಅಜ್ಞಾನವನು ಸೋಲಿಸಿದರು.
ಚೆನ್ನಭೈರಾದೇವಿ ವೀರ ಬಲದಿಂದ ಶತ್ರುವನು ಮುರಿದರು
ಇವರ ಸಾಧನೆ ಶಾಶ್ವತ ದೀಪದಂತೆ ಹೊಳೆಯಿತು,
ಇವರ ನೆನಪು ಶಾಶ್ವತವಾಗಿ ತನುಮನದಲ್ಲಿ ಉಳಿಯಿತು.
----------- ಆಶಾ ಡಿಸೋಜಾ ✍️✍️✍️

- Asha Dsouza

06 Sep 2025, 09:47 am
Download App from Playstore: