? ಕನಸಿನಲ್ಲಿ ಕಾಡುವ ಕನ್ಯೆ ??


ಕಾಣದ ಮುದ್ದಾದ ಅಂದನ
ನೋಡಿ ನಾಚುತ ನಾಚುತ
ಸೂರ್ಯನು ಮೆಲ್ಲನೆ ಕೆಂಪೇರಿ
ಅಂಬರದಿ ಗೊತ್ತಾಗದೆ ಜಾರುತಿಹನು
ಬಾನಗಲಕ್ಕು ಬೆಳದಿಂಗಳ ಚೆಲುತಾ
ಪೂರ್ಣ ಚಂದಿರನು ಮತ್ತೆ ಬಂದನು
ಬೆಳದಿಂಗಳ ರೆಷಿಮೆಯಾ
ಸೀರೆಯಾ ಹುಡಿಸಲು
ಕಂಗಳಲಿ ಮೌನದಿ‌ ಮಾತಾಡಿ
ಕಣ್ಣಂಚಲೆ ಕರೆದ ಹೊರೆ ನೋಟಕೆ
ತಂಪಾದ ತಂಗಾಳಿಯೂ ಕೂಡ
ನನ್ನನು ಸೋಕಿ ಮಾಯವಾಯಿತು
ತುಟಿಯಂಚಲಿ ಅರಳಿದ
ಹೂನಗೆಯ ಸಂತಸಕೆ ಮಳೆಬಿಲ್ಲು
ಕೂಡಾ ಮೆಲ್ಲನೆ ನಾಚುತ
ಆಗಸದ ಮೆಟ್ಟಿಲನು ಏರಿ ರಂಗೇರುತಿಹುದು
ಕವಿಯೋಬ್ಬ ಕಲ್ಪನೆಯಲ್ಲೆ
ಹೊಸದಾದ ಜಾಡು ಹಿಡಿದು
ಕಲ್ಪಿಸಿ ಬರೆಯುತ ವರ್ಣಿಸಿದನು
ಸೌಂದರ್ಯ ರಾಶಿಯೆಲ್ಲಾ
ಅರಳಿದ್ದು ನಿನ್ನಿದಲೆ ಎಂದು...
ನಾಚಿದ ಮನಸ್ಸು ನೀರಾಗಿ
ಕಾಲ್ ಬೆರಳಲ್ಲಿ‌ ರಂಗೋಲಿ ಹಾಕುತ
ಮನಸಲ್ಲಿ‌ ಚಡಪಡಿಕೆ ಹೆಚ್ಚಾಗಿ
ಸುಮ್ಮನೆ ಉಗುರು ಕಚ್ಚುತ
ಕಂಗಳು ಮೌನದಿ ಆಸೆಗಳ ಸೂಚಿಸಿವೆ
ಹೀಗೆ ಕನಸಲ್ಲೊಂದು
ಕನಸ ನೆನೆದು ನೆ‌ನೆದು ಬರೆದೆನು
ಕನಸಿನ‌ ಕನ್ಯಾ ಸುಕುಮಾರಿಗೆ
ನನ್ನ ಕಲ್ಪನೆಯ ಚೆಂದಗಾತಿಗೆ...

- abhi.s.j

19 Sep 2025, 10:41 pm
Download App from Playstore: