ಯಾರೆನೀನು ???
ಯಾರೆನೀನು ???
ಬೆಳಗಿನ ಜಾವದಲ್ಲಿ
ದೀರ್ಘ ನಿದಿರೆಯ ಹಿಂದೆ
ಓಡಿದ ನನ್ನ ಕಾಲ್ಗೆಜ್ಜೆ ಸಪ್ಪಳ ಮಾಡಿ
ಕನಸಿನಿಂದನೆ ನನಸಲ್ಲೆ ಎಚ್ಚರಿಸಿ
ಮುಂಜಾನೆಯ ಮಬ್ಬಿನಲಿ ಮರೆಯಾದ
ಮಂಜುಭಾಷಿನಿ ನಿನೆ ನಾ ?
ಕನಸಿನಾಚೆ ಬಂದು ಕಾಣೆಯಾದ
ನಿನ್ನ ಹುಡುಕಲು ಹಾತೊರೆಯುತ
ನೀ ಮುಡಿದ ಮಲ್ಲಿಗೆಯ
ಪರಿಮಳಕ್ಕೆ ಸೋಲುತ ನಿನ್ನನೆ
ಹಿಂಬಾಲಿಸುವಂತೆ ಮಾಡಿದ
ಚೆಲುವಿನ ಚೋರಿಯು ನೀನೆ ನಾ ?
ಮುಂಜಾನೆಯ ತಿಳಿ ಬಿಸಿಲಿನ
ಕಿರಣಗಳಿಂದ ಹೊಳೆಯುತ್ತಿರುವ
ಇಬ್ಬನಿಯ ಮುತ್ತುಗಳ ಸ್ಪರ್ಷಿಸಿ
ಅವುಗಳ ಜೋತೆ ಮಾತಡಿ ನಲಿದು
ನಾ ಬರುವ ಮೊದಲೆ ಕಣ್ಮರೆಯಾದ
ವರ್ಷಿಣಿಯು ನೀನೆನಾ ?
ನೀಳವಾದ ಕೇಶರಾಷಿಯ ಹರಡಿಕೊಂಡು
ಎಳೆ ಬಿಸಿಲಲ್ಲಿ ಒಣಗಿಸುತ್ತ ನಿಂತು
ಆ ಸೂರ್ಯನನ್ನೆ ಆವರಿಸಿಕೊಂಡ
ಛಾಯೆಯು ನೀನೆನಾ ?
ಸುಮ್ಮನೆ ಎದುರಿಗೆ ಪ್ರತ್ಯಕ್ಷವಾಗಿ
ಸೌಂದರ್ಯದ ರಾಷಿಯ ತೋರಿ
ದಿಗ್ಬ್ರಾಂತನಾಗಿ ಮಾಡಿ ಮನಸ್ಸನೆ
ಮೆಲ್ಲನೆ ಕದ್ದೊಯುದ
ಮಾಯಗಾತಿಯು ನೀನೆ ನಾ ?
insta:- unique_abhyaa
- abhi.s.j
30 Sep 2025, 08:04 am
Download App from Playstore: