ಮನಸೆ ಒಂದು ಸಾರಿ ಕೇಳು
ಒಲವೆ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣ ಭಾಷೆ ಸಾವಿರಾರು
ಎಂದೋ ಎಲ್ಲೋ ಕೇಳಿದಂತ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು ಗೆಳೆಯ ಈ ಹಾಡು
ಎಂದೋ ಎಲ್ಲೋ ಕೇಳಿದಂತ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು ಗೆಳೆಯ ಈ ಹಾಡು
ಮನಸೆ ಒಂದು ಸಾರಿ ಕೇಳು
ಒಲವೆ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣ ಭಾಷೆ ಸಾವಿರಾರು
ಕನಸ ಕಡಲಿನಲ್ಲಿ, ನಾನು ತೇಲಿ ಬಂದೆ
ನನ್ನ ಪ್ರೀತಿ ನಾವಿಕ, ನಿನ್ನ ಕಾಣಲು
ಹೃದಯ ತೀರದಲ್ಲಿ, ನಾನು ಬಂದು ನಿಂತೆ
ನನ್ನ ಪ್ರೀತಿ ಸಾರಿಕ, ನಿನ್ನ ಸೇರಲು
ಒಂದೊಂದು ಕ್ಷಣವು, ನಿನ್ನಿಂದ ದೂರ
ಇರಲಾರೆ ನಾನು, ಎಂದೆಂದಿಗೂ
ಎದೆಯಾ ಗೂಡಲಿ, ಪುಟ್ಟ ಮನೆ ಮಾಡುವೆ
"
ಹೊಸದಾದ ಒಂದು, ಜಗವನ್ನೆ ಇಂದು
ನನಗಾಗಿ ನೀನು, ಸೃಷ್ಟಿಮಾಡಿದೆ
ಹೇಳಲಾರೆ ಏನೂ, ನನ್ನ ಜಗವೆ ನೀನು
ನಿನ್ನನ್ನು ಪಡೆಯಲು, ಅದೃಷ್ಟಮಾಡಿದೆ
ಪ್ರತಿಜನ್ಮದಲ್ಲೂ, ನಿನ್ನೊಲವ ಬಯಸಿ
ಆ ದೇವರನ್ನು, ಪ್ರಾರ್ಥಿಸುವೆನು
ನಿನ್ನ ಈ ಮಾತಿಗೆ, ನಾ ಋಣಿಯಾದೆನು
ನಿನ್ನ ಈ ಪ್ರೀತಿಗೆ, ನಾ ಶರಣಾದೆನು
ಮನಸೆ ಒಂದು ಸಾರಿ ಕೇಳು
ಒಲವೆ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣ ಭಾಷೆ ಸಾವಿರಾರು

insta:- unique_abhyaa

- abhi.s.j

13 Oct 2025, 09:38 am
Download App from Playstore: