ಹುಚ್ಚು ಖೋಡಿ ಮನಸು
********************
ಯಪ್ಪಾ ಬ್ಯಾಡಾಂದ್ರೂ ಕೇಳಲಿಲ್ಲಾ ಪೋರೀ
ಹೋಗತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರಿ
ಹೋಗಬೇಡ್ವೆ ಅವನಾ ಹಿಂದೆ ಚಕೋರೀ
ಅಪ್ಪಾ ಅಮ್ಮಂಗೇ ಹೇಳತ್ತಿದ್ಲು ಸಾರೀ
ನಾ ಹಚ್ಕೊಂಡೀನಿ ಅವನಾ ಭಾರೀ....
ಹೋಗತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೈಕನೇರೀ..
ಬುದ್ಧಿ ಮಾತು ಕೇಳಲಿಲ್ಲಾ
ತಿದ್ದಿಕೊಂಡು ನಡೀಲಿಲ್ಲ
ಕತ್ತಲಾದ್ರು ಮನೆಗೆ ಬರಲೇ ಇಲ್ಲಾ
ಮುಂದಿನ ಜೀವನ ಅವಳಿಗೆ ಹೊಳೀಲೇ ಇಲ್ಲಾ
ಅವನು ಮಾತ್ರ ಕಲಿತಿದ್ದ ಬರೋಬ್ಬರಿ
ಕರ್ಕೊಂಡು ಹೋಗುತ್ತಿದ್ದ ಭಾರಿಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೊಳೆ ಮೀನ್ಹಂಗೆ ಜಾರೀ..
ಬಾಯಿ ಬಾಯಿ ಬಡ್ಕೊಂಡ್ಳು ಖೋಡೀ.
ನನ್ನ ಹಾಗೆ ನೀವಾಗ ಬೇಡೀ..
ಕೇಳ್ತಾವ ಬಿಸಿ ರಕ್ತದ ಜೋಡೀ..
ಕೆಟ್ಟ ಮೇಲೆ ಬುದ್ಧಿ ಬಂತು ನೋಡೀ.
insta:- unique_abhyaa
- abhi.s.j
13 Oct 2025, 09:40 am
Download App from Playstore: