"ಹುಚ್ಚು ಖೋಡಿ ಮನಸ್ಸು"
+++++++++++++++++
ಯಪ್ಪಾ ಬ್ಯಾಡಾಂದ್ರು ಕೇಳಲ್ಲಿಲ ಪೋರಿ
ಹೋಗುತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರೀ
ಹೋಗಬ್ಯಾಡವ ಅವನ ಹಿಂದೆ ಚಕೋರಿ
ಅಪ್ಪ ಅಮ್ಮಂಗೆ ಹೇಳುತ್ತಿದ್ಲು ಸಾರೀ
ನಾ ಹಚ್ಕೋಂಡೀನಿ ಅವನಾ ಬಾರೀ....
ಹೋಗುತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೖಕನೇರಿ..
ಬುದ್ದಿ ಮಾತು ಕೇಳಲಿಲ್ಲಾ
ತಿದ್ದಿಕೂಂಡು ನಡೇಯಲಿಲ್ಲ
ಕತ್ತಲಾದ್ರು ಮನೆಗೆ ಬರಲಿಲ್ಲ
ಮುಂದಿನ ಜೀವನ ಅವಳಿಗೆ ಹೋಳೆಯಲಿಲ್ಲ
ಅವನು ಮಾತ್ರ ಕಲತ್ತಿದ ಬರೋಬರಿ
ಕರಕೋಂಡು ಹೋಗುತ್ತಿದ ಭಾರೀಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೋಳೆ ಮೀನಹಂಗೆ ಜಾರೀ
ಬಾಯಿ ಬಾಯಿ ಬಡ್ಕೊಂಡ್ಳು ಖೋಡಿ.
ನನ್ನ ಹಾಗೇ ನೀವಾಗ ಬೇಡೀ..
ಕೇಳ್ತಾವ ಬೀಸಿ ರಕ್ತದ ಜೋಡೀ..
ಕೇಟ ಮೇಲೆ ಬುದ್ದಿ ಬಂತು ನೋಡಿ..
- Ajjappa Yallappa Pachchinavar
15 Oct 2025, 09:10 am
Download App from Playstore: