ಕೆಂಪಾದ ಚೆಂದುಟಿಗಳೆ
ನಿಮ್ಮ ಕಂಪನದಲಿ ಜಾರುತಿರುವ ಜೇನಿಗೆ
ಈ ಕಂಗಳು ಕಾತರದಿ ದಿಟ್ಟಿಸಿ
ಅದರಗಳು ಸವಿಯಲು ಕಾಯುತಿವೆ

ಮೌನದಿ ಮೆಲ್ಲನೆ ಕರೆದು
ಮನವನ್ನು ದೊಚುವ ಕಂಗಳೆ
ನಿನ್ನ ಅತಿಯಾದ ಆಸೆಗಳ ಮಾತುಗಳಿಗೆ
ಆಸೆಯೂ ಜೊತೆಯಾಗಿದೆ

ಮಳ್ಳಿಯಂಗೆ ಸೆಳೆಯುವ ನಗುವೆ
ನಿನ್ನಾ ಸಂತಸಕ್ಕೆ ಅರಳುವ
ಮುದ್ದಾದ ಅಂದಕ್ಕೆ
ಕಂಗಳು ಕಲೆತು ಒಂದಾಗಿವೆ

ನಾಚೀ ರಂಗಾದ
ಸೇಬೆಹಣ್ಣಿನಂತ ಕೆನ್ನೆಗಳೆ
ನಿಮ್ಮನು ಏನು ಮಾಡಲಿ
ಎಂದು ತುಟಿಗಳು ಯೋಚಿಸುತ್ತಿವೆ

ಬರಸೆಳೆಯುವ ಮುದ್ದಾದ
ಭಾವನೆಗಳೆ ನಿನ್ನ ಸಲುಗೆಗೆ
ಹೊಸದೊಂದು ಅನುರಾಗವು ಅರಳಿ
ಹೊಸ ಹೊಸ ಆಸೆಗಳು
ಕೈ ಬೀಸಿ ಕರೆದಂತಿವೆ

insta:- unique_abhyaa

- abhi.s.j

18 Oct 2025, 09:10 pm
Download App from Playstore: