ಸ್ವರ್ಗದಿಂದಾ ಪ್ರತ್ಯಕ್ಷವಾಗಿ
ನೀ ಎದುರಿಗೆ ಬಂದಾಗ
ಕಾಣದ ಆಸೆಯೊಂದು ಮೊಳಕೆಯೊಡೆದು
ಅನುರಾಗ ತರಂಗಗಳಲಿ ಬೆರೆತು
ಪ್ರೀತಿಯಾಗಿ ಅವತರಿಸಿದೆ
ಮಾಗಿದ ಮನಸಿನಾಸೆಗಳು
ಒಂದೊಂದಾಗಿ ಬಂದು ನಿನ್ನ ಬಳಿ ಹೇಳಲು
ರಂಗು ರಂಗಾಗಿ ಕಾಯುತಿವೆ
ಅದೇನು ಮೋಡಿಮಾಡಿದೆಯೊ ಕಾಣೆ
ನಿನ್ನ ಸೌಂದರ್ಯಕೆ ಮಾರುಹೋಗಿ
ಹೃದಯವು ಕ್ಷಣಾರ್ಧದಲ್ಲಿ
ನಿನ್ನಲಿಯೇ ಜಾರಿಬಿಟ್ಟಿತು
ಕೊಂಚ ಧೈರ್ಯ ಮಾಡಿ ಕದ್ದು ಮುಚ್ಚಿ
ನಿನ್ನಾ ಹಿಂಬಾಲಿಸುತಲಿ
ಆಸೆಗಳು ಹೆಚ್ಚಾಗಿ ಯಾರೆ ನೀನು ಚೆಲುವೆ
ಎಂದು ಕೇಳಿಬಿಡು ಅಂತಾ ಸಲಹೆ ನೀಡಿವೆ
ಚೆಲುವೆಯಾ ಉತ್ತರ ಸ್ಪಷ್ಟವಾಗಿ ಆಲಿಸಲು
ಹತ್ತಿರ ಹತ್ತಿರ ಬಂದಾಗ ಕಂಗಳು ಸುಮ್ಮನಿರದೆ
ಅಪ್ರತಿಮ ಚೆಲುವನ್ನು ಅಂದಾಜು ಮಾಡುತ
ಮೊದಲನೆಯ ನೋಟಕೆ ಮರುಳಾಗಿ
ಹತ್ತಿರದಿಂದಲೆ ನೋಡುತಾ ನಿಂತಿದೆ
ಮನಸಿನಾಸೆಯೇಕೊ ನಿಯಂತ್ರಣ ತಪ್ಪಿ
ಭೊಗಸೆ ತುಂಬಾ ಅವಳ ಚೆಲುವನ್ನು ಹಿಡಿದು
ಅದರಗಳ ಸನಿಹಕೆ ಅದರಗಳು ಸ್ಪರ್ಷಿಸಿ
ತಕ್ಷಣ ಚುಂಬಿಸುತ್ತಾ ........
ಕೊಂಚ ಬಯದಲ್ಲಿ ಜೇನನು ಸವಿಯುವ
ಮತ್ತಲಿ ನಾಲ್ಕು ಕಂಗಳು ಕಣ್ ಮುಚ್ಚಿವೆ
insta:- unique_abhyaa
- abhi.s.j
18 Oct 2025, 09:17 pm
Download App from Playstore: