ಒಲವು ಗೆಲವು
ಬಂದವಳಂತೆ ಬಂದು ಅಪ್ಪಣೆ ಕೇಳದೆ
ಮನ ಕದ್ದು ಹೋಗದಿರು ,
ಕಣ್ಣು ನೋಡುವ ನೆಪದಲ್ಲಿ ಕನಸುಗಳ
ರಾಶಿ ಬಿತ್ತಿ ಹೋಗದಿರು,
ಹೋದವಳಂತೆ ಹೋಗಿ
ನನ್ನ ನೆರಳಾಗಿ ನಿಲ್ಲದಿರು,
ಮರೆತವಳಂತೆ ನಟಿಸಿ
ಕಳ್ಳ ನೋಟವ ಬೀರದಿರು,
ಕರೆಯದಂತೆ ಮೌನವಹಿಸಿ
ಆಯಸ್ಕಾಂತದಂತೆ ಸೆಳೆಯದಿರು,
ಕಳ್ಳನಂತೆ ಮಳ್ಳತನದಿ
ಒಂಟಿಯಾಗಿಸಿ ಬಿಟ್ಟು ಹೋಗದಿರು...
insta:- unique_abhyaa
- abhi.s.j
24 Oct 2025, 02:38 pm
Download App from Playstore: