ಮುಂಗುರುಳು ಹುಬ್ಬನ್ನು ಮುತ್ತುವಾಗ ನನ್ನ ಸಾಚಾತನ ಕಟ್ಟೆ ಒಡೆಯಬೇಕೆಂದೇನಿಸುತ್ತದೆ

ಕಪ್ಪು ಕಾಡಿಗೆ ಇನ್ನು ಸೆಳೆಯಿತಿರಲು ಮತ್ತೊಮ್ಮೆ ಮೌನಿಯಾಗುತ್ತೇನೆ

ವಕಾಲತ್ತಿಗೆ ಕಣ್ಣ ಭಾಷೆಗಳು ಬರುವಾಗ ವಯಸ್ಸಿನ ಪರದೆ ತೆರೆ ಎಳೆದು ಬಿಡುತ್ತದೆ

ಏಕಾಂತಕ್ಕೆ ಒಲವೆಂದು ನಾಮಕರಣ ಮಾಡಿದ್ದೂ ನಾನೆ ಅವಳಂತೆ ಹೊಸತು

ಮೊದಲ ವಾರೆ ನೋಟ ಅನಾಮಿಕ ಸೆಳೆತ ಮುಂಗುರುಳು ಬೀರಿದ ಮಲ್ಲಿಗೆ ಹೇಳದೆ ಕೊಲ್ಲುವ ಆಯುಧ

ಅರ್ಥವೇ ಆಗದ ಹಲ್ಕಾ ಕವನ ಭಾಷೆ ಕೇಳದ ಜಾಣ ಕಿವಿ ಮತ್ತು ಅವಳು

ಪರಿಮಿತ ಆಸೆಯವನು ಅನಂತದೆಡೆಗೆ ನೋಡುವಾಗ ದುಂಬಿಯಗುತ್ತಾಳೆ

ಕಡಲಾಚೆಯ ಅದಿರು ನಾಡಿನವಳು ಉಪ್ಪೆಂದರೆ ಇಷ್ಟವಿರಬೇಕು

ಬೇಕಾಬಿಟ್ಟಿ ಮನಮೋಡಿಯಂತೆ ಕಣ್ಣಿನೊಳಗೆ ತುರುಕಿಸಿ ಹೊರಟಿದ್ದಾಳೆ

ಬ್ರಹ್ಮಚರ್ಯ ಕೊನೆಯಗಿಸುವ ತಂತ್ರ ಹೆನೆದದ್ದು ಅವಳೇ

ಕೌಮರ್ದನ ಎದೆಯಲ್ಲೊಂದು ಸಣ್ಣ ಮಟ್ಟಿನ ಕಂಪನ ಆಗೂ ಹೀಗೂ ಪ್ರಥಮ ಸೋಲು

ಅಂದಿನಿಂದ ವಿಹರದ ಹೊತ್ತಗೆಯಲ್ಲಿ ಹಾಳೇ ವದ್ದೆಯಾಗಲು ಶುಭಾರಂಭ...


insta:- unique_abhyaa

- abhi.s.j

28 Oct 2025, 10:19 pm
Download App from Playstore: