ನನ್ನಾಸೆಯ ಮಲ್ಲಿಗೆ??
ಮಲ್ಲಿಗೆ ಮುಡಿದವಳೆ
ಮಲ್ಲಿಗೆಯಂತ ಮನಸವಳೆ
ನಿನಂದವ ನೋಡುತಲಿ
ನನ್ನ ಮನಸ್ಸೊಳಗೆ ನೆಲಸಿದೆ
ದುಂಡು ಮಲ್ಲಿಗೆಯ ಕಂಪನ್ನು
ಹರಡುತಲ್ಲಿ ಮುದಾಗಿ ಕರೆದವಳೆ
ನಿನ್ನ ಕರೆಗಾಗಿ ಓಡೊಡಿ ಬಂದು
ಕಂಗಳ ಮಾತಿಗೆ ಮನಸ್ಸು
ಮೌನಿಯಾಗಿ ನಿಂತಿದೆ
ನಿನ್ನ ಮುಗ್ದ ಮನಸಿನ ಅನುರಾಗಕೆ
ಪುಟ್ಟ ಪುಟ್ಟ ಹೆಜ್ಜೆಯ ಹಾಕುತ
ಹೃದಯದ ಬಳಿಯಲಿ ಸಾಗುತಲಿ
ಹೊಸದಾದ ಆಸೆಗಳಲ್ಲಿ
ಪ್ರೀತಿಯು ಚಿಗುರಿಸಿದೆ
ದುಂಡು ಮಲ್ಲಿಗೆ ಮೊಗದವಳೆ
ನೀ ಎನೆ ಆಗಿರು ಯಾರೆ ಆಗಿರು
ಮುದ್ದಾದ ಪ್ರೇಮವು ಅರಳಿದೆ
ನೀ ಎನು ಅನ್ನದಿದ್ರೆ
ನಾ ನಿನ್ನ ಪ್ರೀತಿಸಿ ನಿನ್ನ ಒಪ್ಪಿಗೆಯಿದ್ದರೆ
ಮದುವೆಯ ಬಂದನವನ್ನು ಬೆಸೆದು ಜೀವನದಲಿ ಹಾಯಾಗಿರುವ
ನನ್ನಾಸೆಯ ಮಲ್ಲಿಗೆಯೇ
ನಿನ್ನೊಲವಿಗಾಗಿ
ನನ್ನ ಕನಸಿನಾಸೆಗಳ ಧಾರೆ ಎರೆದು
ನಿನ್ನ ಉತ್ತರಕ್ಕಾಗಿ ಕಾಯುತಿರುವೆ
insta:- unique_abhyaa
- abhi.s.j
07 Nov 2025, 10:18 pm
Download App from Playstore: