ಋಣ
ಪ್ರತಿಕ್ಷಣವೂ ಮಗುವಿಗೆ ಒಳಿತಾಗಲಿ ಎಂಬ ಹರಕೆ
ಹಗಲು ರಾತ್ರಿಯ ಪರಿವಿಲ್ಲದೆ ಮಗುವಿನ ಹಾರೈಕೆ
ಎಂಜಲು ಹೇಸಿಗೆ ಎನ್ನದೇ ಸದಾ ಶುಚಿಯಿಡುವಿಕೆ
ಕೆಡುಕೆಲ್ಲಾ ತನಗಿರಲಿ ಒಳಿತೆಲ್ಲ ಮಗುವಿಗೆ ಎಂಬ ಬಯಕೆ

ಜ್ವರ ಬಂದರೆ ಏರುವುದು ಹೆತ್ತವರ ಎದೆ ಬಡಿತ
ಮಗುವಿಗಿಂತ ಹೆಚ್ಚಿನ ನೋವುಣುವುದು ಖಚಿತ
ದುಡಿಮೆಯ ಬಹುಪಾಲು ಮಗುವಿನ ವೆಚ್ಚಕೆ ಸೀಮಿತ
ಮಗುವಿನ ಸುಖದಲ್ಲಿ ತಮ್ಮ ದುಃಖವನ್ನು ಮರೆಮಾಚುತ
ತ್ಯಾಗದಲಿ ತಂದೆ ತಾಯಿಯ ಮೀರಿಸನೂ ಭಗವಂತ

ಸರ್ವಸ್ವವನೂ ಕೊಟ್ಟವರ ಋಣದ ಭಾರ ಅಪಾರ
ಇಳಿವಯಸ್ಸಲ್ಲಿ ಅವರನ್ನು ಮಕ್ಕಳಂತೆ ಕಾಣುವುದು ಧರ್ಮ
ಸಲಹಿದವರನು ಸಂತಸದಿ ಹಾರೈಕೆ ಮಾಡುವುದೇ ಪುಣ್ಯ
ಅವರ ನೋವಿಗೆ ವ್ಯಯಿಸದ ಹಣ ಹೆಣಕ್ಕೆ ಸಮ
ಹೆತ್ತವರು ಕಣ್ಮುಚ್ಚಲು ಸಾರ್ಥಕತೆಯ ಭಾವದಲಿ ಆಗಲೇ ನಿನಗೆ ಮೋಕ್ಷ

ಡಾ. ಅನಿಲ್

- anil

09 Nov 2025, 10:09 pm
Download App from Playstore: