ಗುರುತು

ಗುರುತು

ಗುರುವಿನ ಗುರುತು ಜ್ಞಾನ
ಜ್ಞಾನದ ಗುರುತು ನಾನು
ನನ್ನ ಗುರುತ್ತೇಲ್ಲಿ.?

ಭಕ್ತಿಯ ಗುರುತು ದೇವರು
ದೇವರ ಗುರುತು ಶಕ್ತಿ
ಶಕ್ತಿಯ ಗುರುತ್ತೇಲ್ಲಿ. ?

ಸಂಬಂಧದ ಗುರುತು ಪ್ರೀತಿ
ಪ್ರೀತಿಯ ಗುರುತು ಸಮಾನ
ಸಮಾನದ ಗುರುತ್ತೇಲ್ಲಿ.?

ತ್ಯಾಗದ ಗುರುತು ಸಂನ್ಯಾಸ
ಸಂನ್ಯಾಸದ ಗುರುತು ಜ್ಞಾನೋದಯ
ಜ್ಞಾನೋದಯದ ಗುರುತ್ತೇಲ್ಲಿ..?

ಮನುಷ್ಯನ ಗುರುತು ನುಡಿ
ನುಡಿಯ ಗುರುತು ನಡೆ
ನಡೆಯ ಗುರುತ್ತೇಲ್ಲಿ.?

ತಾಳಿಯ ಗುರುತು ಮದುವೆ
ಮದುವೆಯ ಗುರುತು ನಂಬಿಕೆ
ನಂಬಿಕೆಯ ಗುರುತ್ತೇಲ್ಲಿ.?

ಶಾಂತಿಯ ಗುರುತು ಬಿಳಿ
ಬಿಳಿಯ ಗುರುತು ಕಾಮನಬಿಲ್ಲು
ಕಾಮನಬಿಲ್ಲಿನ ಗುರುತ್ತೇಲ್ಲಿ.?

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

08 Jan 2015, 01:48 am
Download App from Playstore: