ರಾಜಕಾರಣಿಗಳು



ನೇತಾರರೆಂದರೆ
ಬಲಿಷ್ಟರು..
ಸಂದಿಗ್ಧ ಪರಿಸರವನ್ನೂ
ನಿಯಂತ್ರಿಸುವವರು,
ಹತೋಟಿಯಲ್ಲಿಡುವವರು
ಜನರ ಬೇಡಿಕೆಗಳಿಗೆ
ಸ್ಪಂದಿಸಬೇಕಾದವರು
ಸಮಾಜ ಸೇವಕರವರು,
ಸ್ವಯಂ ಸೇವಕರು..
ಅಂಡಲೆಯುವರು,,,,,
ವೋಟಿಗಾಗಿ
ಶಿರಬಾಗುವರು
ಕೆಲವೊಮ್ಮೆ
ಕಾಲನ್ನೂ ಹಿಡಿಯುವರು.
ಜೇಬು ತುಂಬುವುದರಲ್ಲೇ
ಮಗ್ನರಾದವರು
ಲಕ್ಮಿಯನ್ನೊಲಿಸುವ
ತಂತ್ರಜ್ಞರವರು
ಕೋಟಿಗಳ ಬಜೆಟ್ಟು
ಪಾಸು ಮಾಡುವರು,
ಯಾರಿಗೂ ಅಂಜದೆ
ಗೋಣಿ ತುಂಬುವರು..

- ಶಾಹಿದ್ ಉಪ್ಪಿನಂಗಡಿ

26 Aug 2016, 04:09 pm
Download App from Playstore: