ಪರದೆಯ ಹಿಂದೆ
ಸರಿದು ಹೋಗಿರುವೆ ನಾ
ಹೊರಗೆ ಬರುವ ಆಸೆ
ಕರೆಯುತಿದೆ ನನ್ನ

ಏಕೆ ಬಂಧಿಸುವಿರಿ
ನನ್ನ ಬಯಕೆಗಳ
ಬಾಳುವ ಆಸೆ ಇದೆ
ನಿಮ್ಮಂತೆ ನನಗೂ
ಕಲ್ಲಂತೆ ಇರಲಾರೆ ಹೇಳದೆ

ಅರಳುವ ಕನಸಿದೆ
ಮಲ್ಲಿಗೆಯ ಹೂವಂತೆ
ಏಕೆ ನೋಡುವಿರಿ
ಪಂಜರದ ಗಿಳಿಯಂತೆ

ನಾಲ್ಕು ದಿಕ್ಕಿನಲೂ
ನೂರು ಕಣ್ಣುಗಳು
ಕುಕ್ಕಿ ತಿನ್ನುವ ಹದ್ದುಗಳಂತೆ
ಹಾರಲು ಬಿಡಿ
ಸ್ವಚ್ಚಂದವಾಗಿ ಹಕ್ಕಿಯಂತೆ

insta:- unique_abhyaa

- abhi.s.j

10 Nov 2025, 11:09 pm
Download App from Playstore: