ನನ್ನಾಕಿ...
ಅವಳ ಕಣ್ಣುಗಳಲ್ಲಿ ಬೆಳದಿಂಗಳ ಲೋಕ...
ಅವಳ ಮುಖದಲ್ಲಿ ಮುಗುಳ್ನಗೆಯ ಪಾಕ...
ಅವಳ ಮಾತಲ್ಲೇ ಸಪ್ತಸ್ವರ ಕೇಳಿದಂಗ ಆಗುತ್ತೆ ಯಾಕ...
ಅವಳ ನಾಸಿಕ ಸಂಪಿಗೆ
ಬಿಳಿಗೆಂಪು ಬಣ್ಣ ಬೆಣ್ಣೆಯಂತ ಹೆಣ್ಣ ಅವಳ ಕಂಡಾಗ ನಾನಾದೆ ಮೂಖ ವಿಸ್ಮಿತ ಅದಕ್ಕೆ
ಅನ್ಸುತ್ತೆ ಅವಳು ತುಂಬಾ ಕಲಾತ್ಮಕ...
ಅವಳ ಅಂದ ಚಂದ್ರ ಕಳೆಯ ರೂಪಕ...
ಅವಳ ಮನಸ್ಸು ಹೂವಿನಂತೆ ನಾಜುಕ...
ಅವಳು ನಕ್ಷತ್ರ ಲೋಕದ ನಾಯಕಿ ಅಕಿ ನನ್ನಾಕಿ ನನ್ನಾಕಿ..
ಭಾವನೆಗಳ ಬಾಹು ಬಂದನದಲ್ಲಿ ಬಂದಿಸುವೆ ನನ್ನವಳನ್ನು..
ಅವಳ ಭಾವನೆಗಳಿಗೆ ಬಣ್ಣ ತುಂಬುವೆ ಆಕಾಶಡೆತ್ತರದ ಅವಳ ಆಸೆಗಳನ್ನು ನಕ್ಷತ್ರಗಳಾಗಿ ತಂದು ಅವಳ ಪಾದದಡಿ ಇಡುವೇ..
ಅವಳ ಭಾವನೆಗಳ ಜೊತೆ ನನ್ನ ಭಾವನೆ ಸೇರಿಸಿ ಈ ಜೀವಮಾನವೆಲ್ಲ ಸಾಗುವೇ
ಅವಳ ಜೊತೆ ಜೊತೆಯಲಿ...
ತಂಗಾಳಿಯಾಗಿ ಅವಳ ಮುಂಗುರುಳು ಜೊತೆ ಆಡುವಾಸೆ..
ಸುಮಧುರ ಅವಳ ಸಂಗೀತವಾಗಿ ಧ್ವನಿಯಲ್ಲೇ ಗುಣಗುವಾಸೆ..
ಮಳೆ ಹನಿಯಾಗಿ ಅವಳ ನೆನಸಿ ಮನಸೆಲ್ಲಾ ಕುಣಿಸುವಾಸೆ..
ಕನಸಾಗಿ ಅವಳ ಕಣ್ಣಲ್ಲಿ ತುಂಬುವಾಸೆ..
ಖುಷಿಯಾಗಿ ಅವಳ ಹೃದಯದಲ್ಲಿ ಮುಳುಗುವಾಸೆ..
insta:- unique_abhyaa
- abhi.s.j
11 Nov 2025, 07:54 pm
Download App from Playstore: