ನಲ್ಲೆ ನೀನೆಷ್ಟು ಮಾಯೆ ಕಣೆ...
ಪ್ರೀತಿಸುವ ಮುನ್ನ ಹಿಂದೆ ತಿರುಗಿ ತಿರುಗಿ ಗಲ್ಲಿಯ ಹವಾಲ್ದಾರನಾದೆ.
ನೀ ನನ್ನ ಒಪ್ಪಿಕೊಂಡಾಗ ನೀ ಹೇಳುವ ಮಾತಿಗೆಲ್ಲಾ ಹುಂ ಎನ್ನುವ ಜವಾನನಾದೆ.
ನಲ್ಲೆ ನೀನೆಷ್ಟು ಮಾಯೆ.. ನಲ್ಲೆ ನೀನೆಷ್ಟು ಮಾಯೆ.
ಪ್ರೀತಿಯ ಸಾರಾಯಿ ಎಂಬ ಮತ್ತಿನಲ್ಲಿ ನಿಶೆಯಾಗಿ,
ಬಿದ್ದು ಹೊರಳಾಡುತ್ತಿರುವೆ ನಿನ್ನ ಹೃದಯ ಮಂದಿರ ಎಂಬ ತಾನದಲ್ಲಿ.
ನಲ್ಲೆ ನೀನೆಷ್ಟು ಮಾಯೆ.
ಮಾಯೆ ಎಂದು ಕರೆಯಲೇ,
ಚಂಚಲೆ ಎಂದು ಕರೆಯಲೇ ಎಂಬ ಗೊಂದಲದಲ್ಲಿ ಸಿಲುಕಿ ನರಳಾಡುತ್ತಿರುವೆ.
ನಲ್ಲೆ ನೀನೆಷ್ಟು ಮಾಯೆ
ಪ್ರೀತಿ ಮಾಡಿ ಮದುವೆಯಾದ ಮೇಲೆ ಮನೆಯ ಮುಂದೆ ಕಾವಲುಗರನಾದೆ..
ನನಗೆ ನೀನೇ ಎಲ್ಲವು, ನಿನಗೆ ನಾನೇ ಎಲ್ಲವು ಎಂದುಕೊಂಡು ಮಧುರವಾಗಿದ್ದು ಆ ನಮ್ಮ ಸಂಭ್ರಮದ ಕ್ಷಣಗಳಿಂದು ಎಲ್ಲಿ ಮಾಯೆಯಾಗಿವೆ.
ನಲ್ಲೆ ನೀನೆಷ್ಟು ಮಾಯೆ
ಕಣ್ಣು ಮುಚ್ಚಿದರು ನೀನೇ ಕಣ್ಣು ತೆಗೆದರು ನೀನೇ,
ನೀ ನನ್ನ ಬಿಟ್ಟು ಹೋದ ಆ ಕ್ಷಣದಿಂದ ಹೃದಯ ದೇವರೇ ಇಲ್ಲದ ಮಂದಿರವಾಗಿದೆ.
ಪ್ರೀತಿ ಮಾಯೆ, ಹುಡುಗಿಯು ಮಾಯೆ ಎಂದು ತಿಳಿಯುವ ಮುನ್ನವೇ ಹುಚ್ಚನಾದೆ.
insta:- unique_abhyaa
- abhi.s.j
12 Nov 2025, 08:04 pm
Download App from Playstore: