ಮೃದು ಮನದವಳು...


ಪ್ರತಿ ಕವನಕ್ಕೆ
ಸ್ಫೂರ್ತಿ ನನ್ನವಳು
ಅವಳ ನಗುವಿಗೆ
ಸಾಟಿ ಯಾವುದಿದೆ


ಮುಗ್ದ ಮನದೊಳಗೆ
ಕವಿ ಪಟ್ಟ ಕೊಟ್ಟವಳು
ಹೂ ನಗೆಯ ಚೆಲ್ಲಿ
ಕವನ ಕಟ್ಟಿಸುತಿಹಳು


ಅಪ್ಸರೆಯನ್ನು ಮೀರಿಸಿದವಳು
ಮೃದು ಮನಸ್ಸನ್ನು ಹೊಂದಿಹಳು
ಸಹನೆ ಅವಳ ಗುಣವು
ಸಂಯಮವೇ ಅವಳ ಆಭರಣವು


ತಾರೇಯೊಡತಿ ಇವಳು
ನನ್ನೊಡತಿಯ ಸ್ಥಾನ ಪಡೆದಿಹಳು
ನಾ ಮೆಚ್ಚಿ ಬರೆದ ಕವಿತೆಯ
ಸೊಗಸಾದ ಭಾವ ನನ್ನವಳು.

insta:- unique_abhyaa

- abhi.s.j

12 Nov 2025, 08:09 pm
Download App from Playstore: