ರುಮಾಲು

ನೋಡಲು ಬಾರೀ ಚಂದ
ಕೆಲವೊಂದು ರುಮಾಲು
ನಾವೂ ಧರಿಸಿದರೇನಂತೆ ?
ನಮ್ಮೊಳಗೆ ಸವಾಲು

ಕಟ್ಟುವರು ಸುಂದರವಾಗಿ
ಕಾಣಲು ರಿಂಗು - ರಿಂಗು
ಎಲ್ಲಿಂದ ಕೊಂಡರೋ
ಬಣ್ಣಗಳು ರಂಗು - ರಂಗು

ಪರಂಪರೆ ಇರುವ
ಕೆಲವೊಂದು ರುಮಾಲು
ನೋಡುಗರ ಕಣ್ಣಿಗೆ
ಎಷ್ಟೊಂದು ಜಮಾಲು (1)

ಕಟ್ಟಲು ಕೆಲವರು
ಪಟ್ಟಿದ್ದರಂತೆ ಕಷ್ಟ
ಕಷ್ಟಪಟ್ಟರೇನಂತೆ
ಜನರಿಗದೇ ಇಷ್ಟ

ಪದದ ಅರ್ಥ
(1) ಜಮಾಲು = ಚಂದವಾದ

- ಶಾಹಿದ್ ಉಪ್ಪಿನಂಗಡಿ

26 Aug 2016, 04:30 pm
Download App from Playstore: