ಕಳೆದು ಹೋಗಿರುವೆ ನಾನು,
ಭಾವನೆಗಳ ಸುಳಿಗೆ ಸಿಲುಕಿ
ತಡಕಾಡಿದೆ ನನ್ಅಂತರಂಗವನ್ನು,
ಕದ್ದವರು ಯಾರೆಂದು...?
ನಿಮ್ಮಲ್ಲಿ ಯಾರಾದರೂ ಕಂಡಲ್ಲಿ ಹುಡುಕಿಕೊಡಿ..
ಒಂದಿಷ್ಟು ಉಡುಗೊರೆಯ ಆಸೆಗಾದರೂ..
ತಡವರಿಸುತಿದೆ ಮನಸು ಗಾಳಕ್ಕೆಸಿಕ್ಕ ಮೀನಂತೆ.
ಹೊಯ್ದಟಾದಲ್ಲೇ ಉಸಿರುಚೆಲ್ಲಬಹುದು
ಕದ್ದವರು ಯಾರೆಂದು?
ಕದ್ದದ್ದು ಬೇರೇನಲ್ಲ.. ನಿಮ್ಮೊಂದಿಗೆ ಕಳೆದ ನೆನಪಿನ ಬುತ್ತಿಯನ್ನು..
ಹುಡುಕಿಕೊಡಿ ನಿಮ್ಮಲ್ಲಿ ಯಾರೆಂದು. ?


- Shridevi

14 Nov 2025, 12:31 pm
Download App from Playstore: