ಮತ್ತೆ ಮತ್ತೆ ನಕ್ಕಳು...

ಅತ್ತೆ ಮಗಳು
ಸೀರೆಯಲ್ಲಿ
ಮೊದಲ ಬರಿ ಜಾತ್ರೆಯಲ್ಲಿ
ಕಂಡು ಕದ್ದಳು
ಮನವನ್ನು ಮೆಲ್ಲ ಹತ್ತಿರ ಬಂದಳು

ಮುದ್ದು ಮೊಗವ
ಮತ್ತೆ ಮತ್ತೆ ತೋರಿ
ನಾಚಿ ಕಣ್ಣಲ್ಲೇ
ಮನದ ತುಂಬಾ
ಆಸೆಯ ಬಿತ್ತಿದಳು


ಜಾತ್ರೆಗೊಂದು ಮೆರುಗು ಬಂತು
ಅವಳನ್ನು ಕಂಡು
ಮನಸ್ಸಿಗೆ ಖುಷಿಯು ಬಂತು
ಹರೆಯದ ಬಯಕೆಗೆ
ಕಳೆ ಬಂತು
ಮಾಡದಿಯಾಗಿ ಬೆಡಗಿ
ಎಂದು ಮನವು
ಬೇಡಿಕೆಯ ಇಟ್ಟಿತು..

insta:- unique_abhyaa

- abhi.s.j

21 Nov 2025, 08:01 pm
Download App from Playstore: