ಆಸೆ...


ಬರೆದರೆ ಬರೆಯಲಾಗದಷ್ಟು ಬರೆಯುವ ಆಸೆ,
ಹಾಡಿದರೆ ಸಪ್ತ ಸ್ವರಾಗಳಾಗುವ ಆಸೆ,

ನನ್ನವಳ ಅಂದ ಹೊಗಳುವ ಪದ ಪುಂಚ
ಸಾಲದಷ್ಟು ಹೊಗಳುವ ಆಸೆ!


ನನ್ನವಳ ಮನದ ಆಳದಲ್ಲಿ ಹೊಕ್ಕು
ತಿಳಿ ಸಿಹಿ ನಿರಾಗುವಾಸೆ!

ಅವಳ ಕೇಂತುಟಿಯ ಮುಗುಳ್ನಗೆಯ
ಅಂಚಿನಲಿ ಮುಳುಗುವ ಆಸೆ!


ನನ್ನವಳ ಗಿಣಿಮೂಗೂ ಮೂಗಿನ
ಮೂಗುತಿ ಆಗುವ ಅಸೆ,

ನನ್ನವಳು ನಾಚಿ ನೀರಾದಾಗ
ಅವಳ ಕೆನ್ನೆಯ ಕೆಂಪಾಗುವಾಸೆ..

ಕಲ್ಲು ಮನದ ಈ ಕಲ್ಲು ಮಾನವನ
ಮನದಲ್ಲೂ ಪದ್ಯ ಬರೆಸಿದ ನನ್ನಾಕೆಯಾ
ಹೂ ಮನಸಿನ ಮನದಲ್ಲಿ ಎಂದೂ ಬಾಡದ ಹೂ ಆಗುವಾಸೆ.

insta:- unique_abhyaa

- abhi.s.j

25 Nov 2025, 06:28 pm
Download App from Playstore: