ನಾನೊಬ್ಬ ಭಗ್ನಪ್ರೇಮಿ...

ಕಾದು ಕಾದು ಸಾಕಾಗಿದೆ
ಜೀವವಿಲ್ಲದ ಆ ಬೆಂಚುಗಳು
ಲೈಟ್ಕಂಬಗಳಿಗೂ ಯಾಕೋ
ಯಾರೋ ಕಲ್ಲೊಂದು ಹೊಡೆದು ಹೋಗಿದ್ದಾರೆ
ನಾನು ನೀನೂ ಜೊತೆಯಲ್ಲಿ ನಡೆಯಲು
ಇನ್ನು ಆ ದಾರಿ ಕತ್ತಲು..

ಅಯ್ಯೋ ಎಂತ ಪೆದ್ದ ನಾನು
ದಾರಿಯಲಿ ನುಡಿಯಲು ನೀನಿಲ್ಲವಲ್ಲ ಈಗ..!!
ಸುಮ್ಮನೆ ಕೂತು ಬೋರಗಿದೆ
ಚಾಟ್ ಮಾಡುತ್ತಾ ಕಾಲ ಕಳೆಯೋಕೆ
ನಿನ್ನ ನಂಬರ್ ಹುಡುಕುವ ಸಲುವಾಗಿ
ಮೊಬೈಲನ್ನು ರಿಫ್ರೆಶ್ ಮಾಡ್ತಾ ಇದೀನಿ..
ಅಯ್ಯೋ... ಮತ್ತೆ ನೋಡು..!
ನಿನ್ನ ನಂಬರ್ ಡಿಲೀಟ್ ಮಾಡಿರೋದು
ಮರ್ತೆ ಹೋಯ್ತು...!!

ಒಂದೊಂದ್ಸಲಿ ನಿನ್ನ ಅಂದವ ಹೋಗಳುತ್ತಾ
ಏನೇನೋ ಗಿಚ್ಬೇಕು, ಹಾಡ್ಬೇಕು ಅಂತ ಅನ್ಸುತ್ತೆ
ಆದ್ರೆ ನಿಂಗೆ ಗೊತ್ತು ಅಲ್ವಾ
ನಾನೊಬ್ಬ ಕವಿಯಲ್ಲ ಭಗ್ನಪ್ರೇಮಿಯಂತ..!!

ನಿನ್ನನ್ನ ಮರಿಬೇಕು ಅಂತ
ಎಲ್ಲರ ಜೊತೆ ಹೇಳ್ತಾ ಇದೀನಿ
ನಾ ಅವಳನ್ನ ಮರ್ತಿದೀನಿ ಅಂತ..!
ಆದ್ರೆ ದಡ್ಡ ನಾನು ಮರ್ತಿದ್ದೀನಿ ಅಂತ
ಜಾಸ್ತಿ ನೆನಪಿಸಿಕೊಳ್ತಾ ಇದೀನಿ..!

ಅಯ್ಯೋ ಬಿಡು ಭಗ್ನಪ್ರೇಮಿಗೆ
ಇದೆಲ್ಲಾ ಮಾಮೂಲ್..!!

insta:- unique_abhyaa

- abhi.s.j

25 Nov 2025, 07:58 pm
Download App from Playstore: