ಯಾರವಳು..??

ಮುಂಗುರುಳು ಮರೆ ಮಾಚುವವಳು
ಚೆಂದದ ನಗೆಯ ಚೆಲ್ಲುವವಳು
ಅಂದದ ನೋಟವ ತೋರುವವಳು
ತಿಳಿಸುವಿರಾ ಮೋಡಗಳೆ ನನಗೇ ಯಾರವಳು??

ಬೆಂಕಿಯಂತ ನೋಟದವಳು
ಬೆಕ್ಕಿನಂತೆ ನಡೆಯುವವಳು
ನಕ್ಕರೆ ಗುಳಿಕೆನ್ನೆಯ ಚೆಲುವಿನವಳು
ತಿಳಿಸುವಿರಾ ಮರಗಳೇ ನನಗೇ ಯಾರವಳು.??

ರೇಷ್ಮೆಯಂತ ನುನುಪಾದ ಕೂದಲದವಳು
ದಾಳಿಂಬೆಯಂತ ದಂತಪಂಕ್ತಿ ಹೊಂದಿರುವವಳು
ತನ್ನೊಂದಿಗೆ ಸುಗಂಧದ ಪರಿಮಳ ಹೊತ್ತು ತರುವವಳು
ತಿಳಿಸುವಿರಾ ಪಕ್ಷಿಗಳೇ ನನಗೇ ಯಾರವಳು??

ನನ್ನಲ್ಲೇ ಮನೆ ಮಾಡಿ
ನನಗೇ ಹುಚ್ಚು ಹಿಡಿಸಿದವಳು..

insta:- unique_abhyaa

- abhi.s.j

27 Nov 2025, 07:40 pm
Download App from Playstore: