ಅಮ್ಮನ ಬಗ್ಗೆ ಒಂದೆರೆಡು ಮಾತು
ಲೋಕದೆ ಹಿರಿದು ಮಾತೆಯ ಮಮತೆಯು,
ಅವಳ ಪ್ರೀತಿಯ ಉಣ್ಣುವ ಸೌಭಾಗ್ಯವು,
ದೊರೆತ ಮಾನವ ಜನ್ಮ ಸಾರ್ಥಕವು,
ಅಮ್ಮನೆ ಮಗುವಿನ ಸರ್ವಸ್ವವು,
ಅಮ್ಮನೆಂದರೆ ಕಾಳಜಿಯು,
ಸಂಸಾರದ ಸುಖ ಸಂತೋಷವು,
ಅವಳೇ ಎಲ್ಲರ ನಿಜದೈವ,
ಪೊರೆವಳು ತಾನುಂಡು ನೋವ.
ಮಗುವಿನ ಪಾಲನೆ ಪೋಷಣೆಗೆ,
ಮುಡಿಪಾದ ಜೀವನ ಅವಳದೆ,
ಬದುಕುವ ರೀತಿಯ ಕಲಿಸಿದಳು,
ನಿಸ್ವಾರ್ಥ ಪ್ರೇಮವ ಉಣಿಸಿದಳು.
ಅವಳ ಸೇವೆಯ ಭಾಗ್ಯವು ,
ದೊರೆತರೆ ಬಾಳು ಸ್ವರ್ಗವು,
ಅಶಕ್ತರೆಂದು ಅವಗಣಿಸದೆ,
ಅನುಸರಿಸುವ ಮಾರ್ಗದಿ ಗೆಲುವಿದೆ...!!
*#ಅಮ್ಮ?❤️*
*#ರೇವು ಮರ್ಯಾಯಿ ♥️?
- Revanna Maryayi
29 Nov 2025, 07:55 pm
Download App from Playstore: