ಹೆಣ್ಣು...

ಹೆಣ್ಣೆ ಓ ಹೆಣ್ಣೆ
ಏನಾಯಿತು ನಿನಗೆ
ಹೀಗೇಕೆ ನಮ್ಮ
ಸಂಕೃತಿಯು
ಬೇಸರವಾಯಿತು ನಿನಗೆ!!

ಕೈ ಬಳೆ ನಿನಗೆ
ಭಾರವು ಆಗಿ
ಮರೆಯಾದವು ಎಲ್ಲಿ,
ಹರಸಿನ ಕುಂಕುಮವು
ಕಲೆಯಾಗಿ
ತೊಳೆದು ಹಾಕಿದೀರೆಲ್ಲಿ.

ಹೆಣೆದು ಹಾಕುತ್ತಿದ ಜಡೆಯು
ಬಿಗಿಯಾಯಿತು ನಿನಗೆಲ್ಲಿ.
ಉಡುವ ಸೀರೆಯು
ಗೊಡವೆಯೂ ಆಗಿ
ತೊಡೆದು ಹಾಕಿದೆ ನೀನೆಲ್ಲಿ.

ನಾಚಿಕೆಯಿಂದ
ತಲೆಬಗ್ಗಿಸಿದ
ಹೆಣ್ಣೆ ಎಲ್ಲಿ
ಗರ್ವದಿ ಮೆರೆಯುತ್ತಿರುವ
ನೀನೇಕೆ ಇಲ್ಲಿ..

insta:- unique_abhyaa

- abhi.s.j

02 Dec 2025, 09:24 pm
Download App from Playstore: