ನೀನಿರಬೇಕು ಜೊತೆಯಲಿ
ಓಲವೇ ಬಲವಾಗಿ,ಮನವು ಹೂವಾಗಿ
ಅರಳುವ ಆ ಘಳಿಗೆಯಲಿ
ನೀನಿರಬೇಕು ಜೊತೆಯಲಿ
ನಗುವಿನ ಗಳಿಗೆಗೆ ಜತೆಯಾಗುವರು
ನೂರು ಜನ
ಕಣ್ಣೀರು ಕೆನ್ನೆಯ ಜಾರುವ ಕ್ಷಣಕೆ
ನೀನೇ ಇರಬೇಕು ಜೊತೆಯಲಿ
ಸಾಗುವ ದಾರಿಯ ದೂರವದೆಷ್ಟೋ?
ಬಾಳಿನ ನಾಳೆಯ ತಿರುವುಗಳೆಷ್ಟೋ?
ಸಾಗಲು ಸವೆಸಲು ಬಾಳಿನ ಪಥವ
ಪ್ರತಿ ಹೆಜ್ಜೆಗೂ ನೀನಿರಬೇಕು ಜೊತೆಯಲಿ
ಗೆಲುವಿನ ದಿನ,ಸೊಲಿನ ಕ್ಷಣ
ಕಲಿತು ಅರಿತು ಮುನ್ನಡೆಯಲು
ನೀನಿರಬೇಕು ಜೊತೆಯಲಿ
ತಿಳಿ ಹಾಸ್ಯಕೆ ನಕ್ಕು ಹಗುರಾಗಲು
ಮಾತಿಗೆ ಅರ್ಥವಾಗಲು ಮೌನಕೆ ದನಿಯಾಗಲು
ಮನದ ನೂರು ಭಾವಗಳಿಗೆ ಬಣ್ಣವಾಗಲು
ನೀನಿರಬೇಕು ಜೊತೆಯಲಿ ,
ಬದುಕಿನ ಬೆಳಕಿನ ರಶ್ಮಿ ಸದಾ ಅನಂತವಾಗಲಿ
ಸದಾ ಅನಂತವಾಗಲಿ
- RASHMI BHAT
05 Dec 2025, 01:28 pm
Download App from Playstore: