ರವಿ

ಬಯಸುತ್ತಿದೆ ಸವಿಯಲು ನಿನ್ನ ಸೌಂದರ್ಯವನ್ನು
ಅಡಗಿಸಿತ್ತು ಮಂಜು ಮೋಡಗಳನ್ನು
ಹುಡುಕುತ್ತಿದ್ದವು ಕಣ್ಣುಗಳು ನೀನನ್ನು

ಸೋಲುವ ಹೊರಾಟವಾದ ಜೀವನದಲ್ಲಿ
ಬಿಡುವು ಮಾಡಿಕೊಂಡು ಬಂದಿಯೇನು
ಉಸಿರಾಡುವ ಶವವನ್ನಿಟ್ಟುಕೊಂಡು
ನಿನ್ನ ನೋಡಲು,ಮರಳಿ ಚೈತನ್ಯ ಪಡೆಯಲು.

ಬ್ರಹ್ಮಾಂಡವನ್ನು ಬೆಳಗುವ ದೇವನೇ
ನನ್ನ ಅಂತರಂಗದ ದೀಪವನ್ನು ಬೆಳಗು ಬಾ
ಸೋಲುವವರೆಗೆ ಹೊರಾಡಲು ಶಕ್ತಿಯನ್ನು ನೀಡಲು ಬಾ.

- Manju

05 Dec 2025, 05:17 pm
Download App from Playstore: