ಗೋರಿ ಮಾತಾಡುತಿದೆ..

ನನ್ನೊಳಗೆ ಗೊರಿಯೊಂದು
ಮಾತಾಡುತ್ತಿದೆ
ಅದೆಷ್ಟು ನೋವುಗಳು
ತಾನು ನೈತಿಕ ದಿವಾಳಿ ಎಂದೂ
ಕಪ್ಪು ಗೋರಿಗೆ ಬಿಳಿಯ
ಬಣ್ಣವ ಬಳಿಯುತಲಿದೆ
ನಾನು ಸುಮ್ಮನೆ ಜಡವಾಗುತ್ತೇನೆ..

ಎರಡು ಜೊತೆ ಜೊತೆಯಾಗಿ
ಹಣತೆಗಳು ಬೆಂಕಿಯಾಗಿ
ಉರಿಯುತಿದೆ ಶೋಷಣೆಯ
ಮಗ್ಗುಲಲ್ಲಿ ಮಲಗಿದ
ಪಿಂಡಗಳ ಸುಡುತ್ತಾ

ಇವೆಲ್ಲವ ಮರೆತಿದ್ದೇನೆ ಎನ್ನುವುದಕ್ಕಿಂತ
ಹಣತೆಯ ಬೆಂಕಿಗೆ
ಅಲಂಕಾರದ ವಸ್ತುವಾದ ಮಲ್ಲಿಗೆ
ಇಲ್ಲ್ರ ಅಡಗಿರುವ ದುರ್ನಾತವ
ಕಳೆದು ಬಾಡುತಿದೆ
ಗೊರಿಯ ದೀಪದ ಮೇಲೆ

ಈಗೀಗ ಬತ್ತಿಹೋಗಿರುವ
ಕಣ್ಣಿನ ಕಂಬನಿಗೆ
ಎಕ್ಕದ ಹಾಲಸುರಿದು
ತಿಥಿಯ ಹಬ್ಬಕ್ಕೆ ಕಡ್ಡಿಹಚ್ಚ ಬೇಕಿದೆ.

ಇನ್ನಾದರೂ ಚಿಗುರಬಹುದು
ಎಂದೂ ತಿಳಿದಾಗ
ಇಲ್ಲ ಬೇವಿನ ಕಹಿಗೆ
ಬೆಲ್ಲಸುರಿದು ಹಾಗೇ ಎನಿಸುತ್ತದೆ
ನಾನು ಗೊರಿಯೊಳಗೆಯ
ಒಬ್ಬನಾಗಿ ಬಿಡುತ್ತೇನೆ
ಗೊರಿಮಾತಾಡುವಾಗ..

Instagram:- unique_abhyaa

- abhi.s.j

11 Dec 2025, 10:44 am
Download App from Playstore: