ಒಬ್ಬನಿದ್ದೆ ನಾ, ಒಬ್ಬನಾದೆನಾ!
ಪ್ರೀತಿ ಮುಡೋ ಮುನ್ನ ಒಬ್ಬನಿದ್ದೆ ನಾ,
ಪ್ರೀತಿ ಮುಗಿದ ಮೇಲೂ ಒಬ್ಬನಾದೆನಾ!.
ನನ್ನ ಬುದ್ದಿಯ ದೌರ್ಬಲ್ಯವೋ, ಇಲ್ಲಾ ಅವಳ ಅಂದದ ಪ್ರಾಬಲ್ಯಾವೋ;
ಮೊದಲ ನೋಟದಿ ಹೆಚ್ಚಿತ್ತು ಪ್ರೇಮದ ತಾಪ, ಅದರ ಹಿಂದೆಯೇ ಮರೆಯಾಗಿತ್ತೋ ಯಾವುದೋ ಶಾಪ.
ಪ್ರೀತಿ ಮುಡೋ ಮುನ್ನ ಒಬ್ಬನಿದ್ದೆ ನಾ,
ಪ್ರೀತಿ ಮುಗಿದ ಮೇಲೂ ಒಬ್ಬನಾದೆನಾ!.
ಪ್ರೀತಿ ಉಣಿಸಲು ಬಂದು ಒಲಸೇ ಹೋದವಳು
ಸ್ವರ್ಗಕ್ಕೆ ಮೂರೇ ಗೇಣು ಎಂದೂ ಪ್ರೀತಿಸಿ, ನರಕಕ್ಕೆ ಒಬ್ಬನನ್ನೇ ನೂಕಿದಳು.
ಹುಸಿನಗೆ ತಿಳಿಯದೆ, ಅವಳ ಮೇಲ್ನೋಟದ ಪ್ರೀತಿಯಲ್ಲಿ ಮುಳುಗಿದೆ ;
ಕೆಂಡದ ಬಿಸಿಗೆ ಬೆಲ್ಲ ಕರಗುವ ಹಾಗೇ, ಮೋಸದ ಪ್ರೀತಿಗೆ ಮನಸು ಮರುಗಿದೆ!
ಪ್ರೀತಿ ಮುಡೋ ಮುನ್ನ ಒಬ್ಬನಿದ್ದೆ ನಾ,
ಪ್ರೀತಿ ಮುಗಿದ ಮೇಲೂ ಒಬ್ಬನಾದೆನಾ!.
Instagram:- unique_abhyaa
- abhi.s.j
17 Dec 2025, 07:16 pm
Download App from Playstore: