ಕೊಂದುಬಿಡು...

ಕೊಂದುಬಿಡು ಗೆಳತಿ ಕೊಂದುಬಿಡು
ಮತ್ತೆಂದೂ ಬಾರದಂತೆ ಕೊಂದುಬಿಡು
ಇನ್ನೆಂದೂ ಕಾಣದಂತೆ ಕೊಂದುಬಿಡು
ಮರೆಯುವಂತೆ ಕೊಂದುಬಿಡು
ನೋಂದೊಡನೆ ಬರುವುದನು
ನೆನೆಯದೆ ಕೊಂದುಬಿಡು
ಮತ್ತಷ್ಟು ಮಗದಷ್ಟು
ನೋಯಿಸದಂತೆ ಕೊಂದುಬಿಡು
ಮೊದಲೇ ಹೇಳಿಬಿಡು ಗೆಳತಿ
ಬರಬೇಡ ಎಂದೂ
ಮರೆತಾದರೂ ಬಂದರೆ
ಮತ್ತೊಮ್ಮೆ ಕೊಂದುಬಿಡು
ಕೊಂದುಬಿಡು ಗೆಳತಿ ಕೊಂದುಬಿಡು
ನಿನ್ನ ಕಣ್ಣೀರನ್ನು ಕೊಂದುಬಿಡು
ನಿನ್ನನ್ನು ಕೊಲ್ಲುವ ಮೊದಲೇ
ನೀನೇ ಕೊಂದುಬಿಡು ಗೆಳತಿ
ನಿನ್ನ ಕಣ್ಣೀರನ್ನು ಕೊಂದುಬಿಡು..

Instagram:- unique_abhyaa

- abhi.s.j

17 Dec 2025, 07:35 pm
Download App from Playstore: