ಕವನ ಪೋಲಿಯೋ ಹನಿಗಳು..




ಎರಡು ಹನಿಗಳ ಸವಿಯ ಸಾರವು ಕಂದನ ಬದುಕಿಗೆ ಶ್ರೀರಕ್ಷೆ,
ಅರಿವಿನ ದೀಪವ ಹಚ್ಚುತ ಸಾಗಲು ದೂರಾಗುವುದು ಈ ಶಿಕ್ಷೆ |
ಆರೋಗ್ಯದ ಹಾದಿಯಲಿ ಹೆಜ್ಜೆಯನಿಟ್ಟು ಅಳಿಸೋಣ ಈ ಭಯವ,
ಸುಸ್ಥಿರ ನಾಳಿನ ಕನಸನು ನನಸಾಗಿಸಿ ಬೆಳಗೋಣ ಬಾ ಜಗವ.

ನಿರ್ಲಕ್ಷ್ಯದ ಇರುಳನು ಸರಿಸಿ ನೀಡು ಲಸಿಕೆಯ ಅಮೃತವ,
ಮಗುವಿನ ನಡಿಗೆಯು ನಗುತಲಿ ಸಾಗಲು ಮಾಡು ನೀ ಹಿತಕಾರ್ಯವ.
ಸಮಯಕ್ಕೆ ಸರಿಯಾಗಿ ಹನಿಯನು ಹಾಕಿಸಿ ತೋರು ನೀ ಪ್ರೇಮ,
ರೋಗಮುಕ್ತ ಸಮಾಜದ ನಿರ್ಮಾಣವೇ ನಮಗಿಂದು ಪರಮಧರ್ಮ.

ಹಳ್ಳಿ ಹಳ್ಳಿಯಲಿ ಮೊಳಗಲಿ ಜಾಗೃತಿ, ಹರಡಲಿ ಜ್ಞಾನದ ಕಿರಣ,
ಸಧೃಡ ಕಾಯದ ಮಕ್ಕಳೇ ದೇಶದ ಭವ್ಯತೆಯ ಸುಲಕ್ಷಣ.
| ಸಂಕಲ್ಪದಲಿ ಒಂದಾಗಿ ನಡೆಯೋಣ ಪೋಲಿಯೋ ಮುಕ್ತಸಮಾಜದಿ,
ನಗುತಲಿ ಬೆಳೆಯಲಿ ಮನೆಮನೆ ಹಣತೆಯು ಪಡೆಯುತ ಸುಖದ ಸಿದ್ಧಿ.

ರಚನೆ
ಶ್ರೀಮತಿ ನಾಗಮಣಿ h b
ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಧರ್ಮಾಪುರ್
ಜಿಲ್ಲೆ ಕಲಬುರಗಿ.

- nagamani Kanaka

21 Dec 2025, 10:21 am
Download App from Playstore: