ಅನಾಮಿಕ: ನಾಳೆ ನಾ ಮದುವೆ.
ಧೃತಿ:ಹೂ ನಾಳೆ ಮದುವೆ .
ಅನಾಮಿಕ: ತುಂಬಾ ಚೆನ್ನಾಗಿ ಕಾಣ್ತಾ ಇದ್ದೀಯ.
ಧೃತಿ : ನಿಜವಾಗಲೂ?
ಅನಾಮಿಕ:ಹ್ಮ್ ನಿಜವಾಗಲೂ.
ಧೃತಿ:ಹೀಗೆ ಅಲ್ವಾ ನೀನು ನೋಡ್ಕೋಬೇಕಂದಿದ್ದು.
ಅನಾಮಿಕ:ಹೌದು ಕೆನ್ನೆ ತುಂಬಾ ಅರಿಸಿನ. ಧೃತಿ:ಮತ್ತೆ?
ಅನಾಮಿಕ:ಮೂಡಿ ತುಂಬಾ ಹೂ, ಮೈ ತುಂಬಾ ಸೀರೆ
ಧೃತಿ:ಅಷ್ಟೇನಾ .
ಅನಾಮಿಕ: ಹಣೆ ತುಂಬಾ ಕುಂಕುಮ, ಕೈ ತುಂಬಾ ಬಳೆ.
ಧೃತಿ: ಮುಗೀತಾ?
ಅನಾಮಿಕ: ನಿನ್ನ ಕೊರಳಲ್ಲಿ ತಾಳಿ ಒಂದ್ ನೋಡಿದ್ರೆ ಸಾಕು ಕಣೆ.
ಧೃತಿ: ಆದ್ರೆ ತಾಳಿ ಕಟ್ಟೋ ಜಾಗದಲ್ಲಿ ನಿನ್ ಇರಲ್ಲ ಅಲ್ವಾ?
ಅನಾಮಿಕ: ಹುಚ್ಚಮ್ಮ ನಾಳೆ ಮದುವೆ ಇಟ್ಕೊಂಡ್ ಯಾರ ಆದ್ರು ಅಳತಾರ?
ಧೃತಿ: ಮನಸಲ್ಲಿ ಒಬ್ಬರನ್ನ ಇಟ್ಕೊಂಡು ಇನ್ನೊಬ್ಬರ ಜೊತೆ ಬದುಕು ಅಂದ್ರೆ ಹೇಗ್ ಹಾಗುತ್ತೆ?
ಅನಾಮಿಕ: ನನ್ನನ್ನು ಕ್ಷಮಿಸ್ತೀಯ ತಾನೆ?
ಧೃತಿ: ಯಾಕೆ ಹೀಗೆಲ್ಲ ಮಾತಾಡ್ತೀಯ?
ಅನಾಮಿಕ: ಮತ್ತೇನಿನ್ನು? ಚಿಕ್ಕ ವಯಸ್ಸಿನಿಂದ ಇಬ್ರು ಒಟ್ಟಿಗೆ ಬೆಳೆದ್ವಿ,ಇಷ್ಟಪಟ್ವಿ ಜೀವನಪೂರ್ತಿ ಜೊತೆಗಿರ್ಬೇಕಂತ ಅನ್ಕೊಂಡಿದ್ವಿ
ನಿನ್ನ ಮಾತನ್ನು ಕೇಳಲಿಲ್ಲ ಈಗ ನೋಡು
ಇತ್ತ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಧೃತಿ: ಪ್ಲೀಸ್ ಇನ್ನೊಂದು ಸಲ ನಮ್ಮಪ್ಪ ಹತ್ರ ಮಾತಾಡು.
ಅನಾಮಿಕ: ಕೈಮುಗಿದು ಬೇಡ್ಕೊಂಡ್ರು ಕಣೆ ನಿನ್ನ ರಾಜಕುಮಾರ್ ತರ ಬೆಳೆಸಿದ್ದೇನೆ ಅಂತ.ಅವರ ಪ್ರೀತಿ ಮುಂದೆ ನನ್ನ ಪ್ರೀತಿ ಏನು ಇಲ್ಲ ಅಂತ ಅನಿಸ್ತು.
ಧೃತಿ: ನಾನ ಮಾತಾಡ್ಲ?
ಅನಾಮಿಕ:ಬೇಡ ಕಣೆ ನಾಳೆ ಕಟ್ಕೋ ತಾಳಿಯಲ್ಲಿ ನಿನ್ನ ತಂದೆಯ ಕನಸಿದೆ.
ಧೃತಿ:ಮತ್ತೆ ನೀನು ಮರೆತು ಬದುಕ್ತಿಯಾ ನನ್ನ?
ಅನಾಮಿಕ: ಗೊತ್ತಿಲ್ಲ ಆದ್ರೆ ಬದುಕ್ತೀನಿ.
ಧೃತಿ:ಸರಿ ಜಾಸ್ತಿ ಸಿಗರೇಟ್ ಸೇದ ಬೇಡ ,ಗಾಡಿ ಹುಷಾರಾಗಿ ಓಡಿಸು ಆರೋಗ್ಯ ಕಡೆ ಗಮನ ಕೊಡು.
ಅನಾಮಿಕ:ಸರಿ ನಿಂದು ಕೂಡ ಕೊನೆ ಬಿಟ್ಟೆ ಅನ್ಸುತ್ತೆ ಏನಾದರೂ ಹೇಳಬೇಕಾದರೆ ಹೇಳ್ಬಿಡು.
ಧೃತಿ:ಜೋಪಾನ.
ಅನಾಮಿಕ: ಮುತ್ತೈದೆ ಆಗಿರು.
ಧೃತಿ :ಹೋಗ್ತೀನಿ.
ಸಂಗಮೇಶ.


- Sangamesh Tumbagi

05 Jan 2026, 02:15 pm
Download App from Playstore: