ಕತ್ತಲ ನಿಟ್ಟುಸಿರು...
ನಿನ್ನ ಬೆತ್ತಲೆ ಬೆನ್ನಮೇಲೆ
ಮುತ್ತಿಟ್ಟು ನನ್ನ ತಾಜಾ ಕನಸು
ನನಸಾಗಲಿಯೆಂದು
ಆಶಿಸುತ್ತೇನೆ ಹುಡುಗಿ
ಪ್ರತಿ ನಿದೀರೆಗೂ
ನಿನ್ನ ನೆನಪೊಂದನೇ
ಸ್ಖಲಿಸೋ ಅಮಾಯಕ
ನಾನೀಗ ಪೋಲಿಯೆನ್ನದಿರು
ತುಟಿಕಚ್ಚುತ್ತೇನೆ
ಒಂದಿಷ್ಟು ತಪ್ಪುಗಳಾಗಲಿ
ನಿನ್ನವನೆಂಬುದಕ್ಕೆ ಮುನ್ನಿಸಿಬಿಡು
ಪರಮಪಾಪಿಯ ಪ್ರೇಮಕ್ಕೆ
ಜಗದ ಹಂಗು
ಬೇಕಾಗಿಲ್ಲ ಇವಳೇ
ಬೇವರುಗಳನ್ನೆಲ್ಲಾ
ಅದಲು ಬದಲು ಮಾಡಿಕೊಳ್ಳೋಣ
ಪರಿಪೂರ್ಣ ನಿಶ್ಯಬ್ದಲಿ
ನಿನ್ನ ನಿಟ್ಟುಸಿರಿಗೆ ಕಿವಿಯಾಗುತ್ತೇನೆ
ಜಗದ ಕತ್ತಲಿಗೆ
ಪ್ರೇಮದ ಬೆಳಕನಿಡಿವ
ನಾವಿಕ ನಾನು ಹಾಗಾಗಿ
ನಮ್ಮ ನಡುವೆ
ಮರೆಯಾಗದಿರಲಿ
ನಾಚಿಕೆ ತುಂಡಡುಗೆಯು ಸಹ
ನಾ ನಿನ್ನಲಿ ಕಳೆದುಹೋಗುವಾಗ
ಮರೆಯುತ್ತೇನೆ ನನ್ನನ್ನೇ
ಬರಸೆಳೆದುಕೋ ಬಿಗಿದಪ್ಪಿ
ಲೇ ಇವಳೇ
ನೀ ಅಷ್ಟು ಮಾತ್ರ
ಕಾಡುವವಳಾಗಿದ್ದಿ
ನನ್ನನ್ನು..!
Instagram:- unique_abhyaa
- abhi.s.j
11 Jan 2026, 06:45 pm
Download App from Playstore: