ನಿವೃತ್ತಿ ಜೀವನದ ಕನಸು


ಬಾಗಿಲ ಒಳಗೂ ಹೊರಗೂ ಪರದಾಟ
ಘಂಟೆಗಳ ಎಣಿಸುವ ಪರಿಪಾಠ
ತವಕದಲಿ ಹೃದಯದ ಬಡಿದಾಟ
ಸಮಯದೊಂದಿಗೆ ಮನಸಿನ ಓಟ

ಜೀವನದ ಕ್ಷಣ ಕ್ಷಣವೂ ಆತುರ
ಮಕ್ಕಳನ್ನು ಶಾಲೆಗೆ ಕಳುಹಿಸುವ ಕಾತುರ
ಪತಿಗೆ ಊಟದ ಡಬ್ಬಿ ತಯಾರಿಸುವ ಆತುರ
ನಂತರ ಕಚೇರಿಗೆ ಓಡುವಿಕೆ ನಿರಂತರ

ಜೀವನದ ಈ ಪರಿಪಾಠದ ಅಂತ್ಯಕೆ ಕಾತುರ
ಆ ದಿನ ಬಂದಾಗ ಅದೆಷ್ಟೋ ಸಡಗರ
ನೆಮ್ಮದಿಯ ಜೀವನ ನಡೆಸುವ ಹುನ್ನಾರ
ಪ್ರವಾಸಗಳ ಪಟ್ಟಿಯ ತರಾತುರಿ ನಿರಂತರ

ಎರಡು ದಿನ ಖುಷಿಯ ಅರಿವಾಯಿತು
ನಂತರ ಮೊಮ್ಮಕ್ಕಳಿಗೆ ಪಾಠ ಶುರುವಾಯಿತು
ಸೊಸೆ ಮೊಮ್ಮಕ್ಕಳನ್ನು ಸಂಭಾಳಿಸುವಂತಾಯಿತು
ಸಂಸಾರದ ಹೊಣೆ ಜಾಸ್ತಿಯಾಯಿತು

ಮಾವನ ಆರೈಕೆಗೆ ಕೊನೆಯಿಲ್ಲದಾಯಿತು
ಅತ್ತೆಯ ಪ್ರವಾಸಕೆ ಅಂತ್ಯವಿಲ್ಲದಾಯಿತು
ಸಂಸಾರದ ಹೊಣೆ ಹೆಚ್ಚಾಯಿತು
ನಿವೃತ್ತಿ ಜೀವನದ ಕನಸು ನುಚ್ಚು ನೂರಾಯಿತು

ಕ.ರಂ. ಶೈಲಜಾ, ಮೈಸೂರು


- shyla

31 Jan 2026, 06:37 pm
Download App from Playstore: