ಪಯಣ
ಸಾಗುತಿದೆ ದಾರಿ ನಡೆದಷ್ಟು ಉದ್ದಕ್ಕೂ
ಗಮ್ಯ ಎಲ್ಲಿಗೋ.
ಅರಿವಿಲ್ಲ ಪಯಣ ಹೂವಿನ ಹಾಸಿಗೆಯೋ
ಮುಳ್ಳಿನ ದಾರಿಯೂ.
ಗುರಿ ತಲುಪುವ ಧಾವಂತದಲ್ಲಿ ಎದರಾಗೋ ಪರೀಕ್ಷೆಗಳೆಷ್ಟೋ.
ಗೆಲ್ಲುವ ಸಂಭವ ಎಷ್ಟೋ.
ಸಿಗುವ ಅನುಭವ ಎಷ್ಟೋ.
ಕಲಿಯುವ ಪಾಠ ಎಷ್ಟೋ.
ಜೀವನ ಎಂಬ ಪುಸ್ತಕಕ್ಕೆ
ಶಾಲೆಯ ಅಗತ್ಯವಿಲ್ಲ ಗುರುವಿನ ಅಗತ್ಯವಿಲ್ಲ
ಅನುಭವವೇ ಪಾಠ ಸಮಯವೇ ಗುರುಗಳಾಗಿ
ಮಾರ್ಗದರ್ಶಿಸುತ್ತವೆ.
- shreya M S
10 Mar 2026, 07:24 pm
Download App from Playstore: