ತಾಯಿಯ ನುಡಿ



ತಾಯಿಯ ನುಡಿ

ಮಗುವಿನ ಮೊಗದೊಳ್ ನಗುವಿನ ಕುಡಿಯಿದು /
ಸೊಗಸಿನ ಮಮತೆಯ ಕೂಗಿನ ನುಡಿಯಿದು //
ಅಮ್ಮನು ಬಾಚುತ್ತಲಿಟ್ಟ ಮುತ್ತಿದು /
ನಮ್ಮಯ ಹೊಣೆಯಿದು ತುತ್ತಿನ ಗತ್ತಿದು //

ಚಂದನ ವನವಿದು ಮಂದಿರವದರಲೆ /
ಸುಂದರ ಮನವಿಹ ಕಂದರ ನುಡಿಯಲೆ //
ಚೆಂದದಿ ಕನ್ನಡ ಕುಂದದೆ ಕಲಿವರು /
ಹಂದರ ಲತೆಯೊಳ್ ಸುಮಗಳು ನಲಿವರು //

ನುಡಿಯೊಳ್ ಮುತ್ತಿನ ಹಾರವ ಹಾಕುವ/
ದುಡಿಯುವ ಬೆವರಿನ ಹನಿಗಳ ಹರಿಸುವ//
ಜಾಣರ ಜನಪದ ಸುಲಿದಿಹ ಫಲದೊಳ್ /
ವಾಣಿಯು ನಾಟ್ಯವು ಒಲಿದಿಹ ಛಲದೊಳ್ //

ಕಗ್ಗದ ಸಗ್ಗಕೆ ಕರೆಯುತಲೋಗರ
ಹಿಗ್ಗಲಿಯನುಭವ ಸಾರದ ಸಾಗರ //
ಮಗ್ಗದಿ ನೇಯುತ ಪತ್ತಲ ಮಾತೆಗೆ /
ಸುಗ್ಗಿಯ ಫಸಲಿದೆ ನುಡಿಯುವ ಮಾತಿಗೆ / /

ಹಳ್ಳಿಯ ಜನಗಳವೊಳ್ಳೆಯ ನುಡಿಗಳು /
ಬಳ್ಳಿಯ ಕಂಪಿನ ಭಾವದ ಹೂಗಳು //
ಕುಡಿಯಿರಿ ತಂಪಿಗೆ ಪಾನಕ ಬಿಸಿಲಿಗೆ /
ನುಡಿಯಿರಿ ಕನ್ನಡ ತಿಲಕವು ನೊಸಲಿಗೆ //

ಚಿಣ್ಣರು ತೊದಲುತಲಮ್ಮಾ ಯೆನ್ನಲು /
ಬಣ್ಣಿಸಲಾಗದು ಕನ್ನಡ ನನ್ನಲು //
ರಾಗದಿ ಗಾನದಿ ಹೊಗಳುವ ಹಾಡುವ /
ಬಾಗುತ ನಮಿಸುತ ರಕ್ಚಿಸಲೋಡುವ //

ನಮ್ಮೆದೆ ತುಂಬಲಿ ನಮ್ಮದೆ ತಾಯ್ನುಡಿ/
ಹೊಮ್ಮಲಿ ಚಿಮ್ಮಲಿ ಭಾವವು ಯಿವಳಡಿ //
ಹೆಮ್ಮೆಯ ನಮ್ಮಯ ಕನ್ನಡ ಬೆಳೆಯಲಿ /
ತಮ್ಮಯ ಮನವನು ನೀಡಿರಿವುಳಿಯಲಿ //

ಶಿವಪ್ರಸಾದ್ ಆರಾಧ್ಯ

- shivaprasad aradhya

14 Apr 2026, 05:12 pm
Download App from Playstore: