ಶಾಲೆಯೊಂದು ದೇಗುಲ

ಶಾಲೆಯೊಂದು ದೇಗುಲ
ಮಕ್ಕಳೇ ದೇವರು
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||

ಸಮವಸ್ತ್ರದ ಚಿಂತೆ ಇಲ್ಲ
ಶೂ-ಸಾಕ್ಸ್ ಕೊಡ್ತಾರಲ್ಲ
ಶುಲ್ಕ ಪಾವತಿ ಇಲ್ಲವೇ ಇಲ್ಲ
ಖಚಿತ-ಉಚಿತ ಶಿಕ್ಷಣ ಯಾವುದು ಚಿಂತೆ ಇಲ್ಲ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||

ಉಚಿತ ಪ್ರವಾಸ ಕರ್ನಾಟಕ ದರ್ಶನ
ಕಲಿಕಾ ಪ್ರಗತಿಗೆ ಲಭ್ಯವಿದೆ ಶಿಷ್ಯವೇತನ
ಶಿಸ್ತು ಸಂಸ್ಕಾರದ ಗುಣಾತ್ಮಕ ಶಿಕ್ಷಣ
ಇಲ್ಲಿ ಓದಿ,ಆಡಿ ಬೆಳೆದ ಕಾಲವೇ ಮಧುರ ಕ್ಷಣ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||

ಬಡವ ಬಲ್ಲಿದ ಎಂಬ ಭೇದ ಭಾವ ಇಲ್ಲಿ ಇಲ್ಲ
ಆಟ, ಪಾಠ ,ಊಟ ಯಾವುದೂ ಕೊರತೆ ಇಲ್ಲ
ಪ್ರತಿ ವರ್ಷ ಮಾಡುವರು ಆರೋಗ್ಯ ತಪಾಸನೆ ಅದರಿಂದ ಮಕ್ಕಳಿಗೆ ರೋಗದಿಂದ ರಕ್ಷಣೆ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ

ಶುಚಿ-ರುಚಿ ಬಿಸಿಯೂಟ
ಬಗೆ ಬಗೆಯ ಆಟ ಪಾಠ
ಹಾಲು ,ಹಣ್ಣು ,ರಾಗಿ ಮಾಲ್ಟ್ ದಿನಾಲು ಒಂದು ಕೋಳಿ ಮೊಟ್ಟೆ
ಪೋಷಕಾಂಶ ಸವಿದ ಮಕ್ಕಳ ರಟ್ಟಿ ಬಲುಗಟ್ಟಿ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||

ಶಿಕ್ಷಕರ ಕೊರತೆ ಇಲ್ಲ
ಅತಿಥಿ ಶಿಕ್ಷಕರು ಇರುವರಲ್ಲ
ಕ್ರಿಯಾಶೀಲ, ಸೃಜನಶೀಲ ಶಿಕ್ಷಕರ ವೃಂದ
ಅವರೊಂದಿಗೆ ಪ್ರತಿದಿನ ಊಟ,ಪಾಠ ಬಲು ಚೆಂದ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||

ಕೊಡುವರಿಲ್ಲಿ ಕುವರಿಯರಿಗೆ ಕರಾಟೆ ತರಬೇತಿ
ಬಾಳಿನಲ್ಲಿ ಬಾರದು ಎಂದಿಗೂ ಭಯದ ಭೀತಿ
ಕಳಿಯುವರು ಮಕ್ಕಳಿಲ್ಲಿ ಒಳ್ಳೆಯ ರೀತಿ-ನೀತಿ
ನೂರಕ್ಕೆ ನೂರು ಪ್ರತಿ ದಿನ ಹಾಜರಾತಿ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||

ರಚನೆ:
ಎಸ್, ಬಿ,ನಿಡಗುಂದಿ
ಪ್ರಭಾರಿ ಮುಖ್ಯೋಪಾಧ್ಯಾಯರು
ಸರ್ಕಾರಿ ಪ್ರೌಢಶಾಲೆ ನರೇಗಲ್ಲ







- Shivappa

24 May 2026, 05:40 pm
Download App from Playstore: